2019 ಫೆಬ್ರವರಿ 14 ರಂದು ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯಿಂದ 44 ಸಿ.ಆರ್.ಪಿ.ಎಫ್ ಯೋಧರು ಬಲಿಯಾಗಿದ್ದು, ಈ ಹುತಾತ್ಮರಾದ ಸೈನಿಕರಿಗೆ ಬಲಿದಾನವನ್ನು ನೆನೆಪಿಸುತ್ತಾ ಕರ್ನಾಟಕ ರಾಜ್ಯದಾದ್ಯಂತ ಫೆಬ್ರವರಿ 14 ರಂದು ಪುಲ್ವಾಮಾ ಹುತಾತ್ಮ ದಿನಾಚರಣೆಗೆ ಬಜರಂಗದಳ ಕರೆ ನೀಡಿದೆ.
ಎಲ್ಲ ಸಂಘಟನೆಯ ಕಾರ್ಯಕರ್ತರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲ್ಲಿದ್ದು. ಎಲ್ಲ ರಾಷ್ಟ್ರ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲು ಸೂಚಿಸಿದ್ದಾರೆ.
ಪ್ರತಿವರ್ಷ ಪುಲ್ವಾಮ ಹುತಾತ್ಮ ದಿನ ಆಚರಿಸಲು ಕೇಂದ್ರ ಸರ್ಕಾರಕ್ಕೆ ಬಜರಂಗದಳ ಅಗ್ರಹ
ಕಳೆದ ವರ್ಷ ನಡೆದ ಈ ಭೀಕರ ಘಟನೆಯಲ್ಲಿ ಬಲಿದಾನವಾದ ಸೈನಿಕರನ್ನು ನೆನಪು ಮಾಡಿಕೊಂಡು ಮತ್ತು ಅವರ ಕುಟುಂಬಗಳಿಗೆ ಗೌರವ ಕೊಡುವ ದೃಷ್ಟಿಯಿಂದ ಪ್ರತಿವರ್ಷ ಫೆಬ್ರವರಿ 14 ರಂದು ಪುಲ್ವಾಮಾ ಹುತಾತ್ಮ ದಿನ ಆಚರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹವನ್ನು ಮಾಡುತ್ತಿದ್ದು, ಈ ಸಂಬಂಧ ಗೃಹ ಸಚಿವರಿಗೆ ಪತ್ರದ ಮೂಲಕ ಮನವಿಯನ್ನು ಮಾಡಿದ್ದಾರೆ.
ಫೆಬ್ರವರಿ 14 ಪ್ರೇಮಿಗಳ ದಿನಕ್ಕೆ ಬಜರಂಗದಳ ವಿರೋಧ
ಭಾರತ ದೇಶವು ಪುಣ್ಯ ಭೂಮಿ. ವೈಶಿಷ್ಟ್ಯವಾದ ಸಂಸ್ಕøತಿ ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ. ಅಲ್ಲದೆ ನಮ್ಮ ಸಂಸ್ಕøತಿ ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದ್ದು, ಶತಮಾನಗಳ ಇತಿಹಾಸ ಹೊಂದಿದೆ. ಅದಾಗಿಯೂ ಭಾರತೀಯ ಸಂಸ್ಕøತಿಗೆ ಸಡ್ಡು ಹೊಡಿಯುತ್ತ ಪಾಶ್ಚತ್ಯ ಸಂಸ್ಕøತಿಗಳು ದಾಳಿ ಮಾಡುತ್ತಿವೆ.
ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ನಮ್ಮ ಅಮೂಲ್ಯವಾದ ಸಂಸ್ಕøತಿ. ಆಚರಣೆ, ಪದ್ಧತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನಾಚರಣೆ ಹಾಗಾಗಿ ಈ ಪ್ರೇಮಿಗಳ ದಿನವನ್ನು ವಿರೋಧಿಸಿದ್ದಾರೆ.
ಪ್ರೇಮಿಗಳ ದಿನವನ್ನು ಆಚರಿಸುವ ಬದಲು ಹುತಾತ್ಮರಾದ ಸೈನಿಕರನ್ನು ನೆನೆಸಿಕೊಳ್ಳಲು ಯುವ ಸಮುದಾಯಕ್ಕೆ ಕರೆ:
ಫೆಬ್ರವರಿ 14 ರಂದು ಇಡೀ ದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕøತಿಯಾದ ಪ್ರೇಮಿಗಳ ದಿನವನ್ನು ಅಚರಣೆ ಮಾಡುತ್ತಿದ್ದು, ಇದರ ಬದಲು ಫೆಬ್ರವರಿ 14 ರಂದು ಪುಲ್ವಾಮದಲ್ಲಿ ಬಲಿದಾನಗೈದ ವೀರ ಸೈನಿಕರ ದಿನವನ್ನು ಆಚರಣೆ ಮಾಡಬೇಕೆಂದು ಬಜರಂಗದಳ ಮನವಿ ಮಾಡಿದ್ದಾರೆ.