Recent Posts

Sunday, January 19, 2025
ಸುದ್ದಿ

ಅಮಾಯಕರ ಮೇಲೆ ಸುಳ್ಳು ಕೇಸು ದಾಖಲು : ಉಳ್ಳಾಲ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಖಂಡರಿಂದ ಮನವಿ-ಕಹಳೆ ನ್ಯೂಸ್

ಅಮಾಯಕರ ಮೇಲೆ ಸುಳ್ಳು ಕೇಸು ದಾಖಲಿಸಿರುವ ಘಟನೆ ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ನಡೆದಿದೆ.

ಮಂಗಳೂರು ತಾಲೂಕಿನ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಪಾವೂರು ಗ್ರಾಮದ ಉಗ್ಗನಬೈಲ್ ಎಂಬ ಪ್ರದೇಶದಲ್ಲಿ ನಿನ್ನೆ ಸಂಜೆ ಯಾವುದೋ ಅಪರಿಚಿತ ವ್ಯಕ್ತಿಗಳು ಹೆಣ್ಣು ಮಕ್ಕಳ ಬಲಾತ್ಕಾರಕ್ಕೆ ಪ್ರಯತ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿನ ಪರಿಸರದ ಕಿರಣ್, ಗುಣಪಾಲ ಹಾಗೂ ಸುಭಾμï ಎಂಬ ಮೂರು ಜನ ಅಮಾಯಕರ ಮೇಲೆ ಕೊಣಾಜೆ ಠಾಣಾ ಪೆÇಲೀಸರು ಪ್ರಕರಣ ದಾಖಲಿಸಿ ವಶಪಡಿಸಿಕೊಂಡಿದ್ದಾರೆ. ಇನ್ನೂ ಘಟನಾ ಸಮಯದಲ್ಲಿ ಯುವಕರು ಬೇರೆ ಪ್ರದೇಶದಲ್ಲಿ ಇರುವ ದಾಖಲೆಗಳು ಇದ್ದು, ಇದನ್ನು ಸರಿಯಾಗಿ ಪರೀಕ್ಷಿಸದೆ ವಿಚಾರಣೆ ನಡೆಸದೆ ಏಕಾಏಕಿ ಮಧ್ಯರಾತ್ರಿ ಯಾರದ್ದೊ ಒತ್ತಡಕ್ಕೆ ಬಂಧಿಸಿ ಸುಳ್ಳು ಕೇಸು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಷಯದ ಬಗ್ಗೆ ಗಂಭೀರವಾದ ತನಿಖೆ ನಡೆಸಿ ಸುಳ್ಳು ಕೇಸು ದಾಖಲಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಪದ್ಮನಾಭ ಮರ್ಕೆದು ಅಧ್ಯಕ್ಷರು ವಿಶ್ವಹಿಂದೂ ಪರಿಷತ್ ಬಜರಂಗದಳ ಉಳ್ಳಾಲ ಪ್ರಖಂಡರು ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಈ ವೇಳೆ ರವಿ ಅಸ್ಸೈಗೋಳಿ, ಚೇತನ್ ಅಸ್ಸೈಗೋಳಿ, ಸೇರಿದಂತೆ ಮತ್ತಿತರರು ಹಾಜರಿದ್ದರು.