Recent Posts

Sunday, January 19, 2025
ಸುದ್ದಿ

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ಸರಕಾರ ; ಪುತ್ತೂರು ಮೂಲಕ ಬೆಂಗಳೂರು – ಗೋವಾಕ್ಕೆ ಹೊಸ ವಿಶೇಷ ರೈಲು – ಕಹಳೆ ನ್ಯೂಸ್

ಪುತ್ತೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕರಾವಳಿಯತ್ತ ಬರುವ ಜನರ ಅನುಕೂಲಕ್ಕಾಗಿ ಬೆಂಗಳೂರು-ಕಾರವಾರ-ವಾಸ್ಕೋ ಹೊಸ ವಿಶೇಷ ರೈಲನ್ನು ರೈಲ್ವೇ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಘೋಷಿಸಿದ್ದಾರೆ. ಈ ಹೊಸ ರೈಲಿನ ವೇಳಾಪಟ್ಟಿ ಮತ್ತು ಇನ್ನಿತರ ತಾಂತ್ರಿಕ ಗೊಂದಲ ನಿವಾರಣೆಯಾಗಿದ್ದು, ಸಂಚಾರ ಆರಂಭಕ್ಕೆ ಸಚಿವರಿಂದ ಹಸಿರು ನಿಶಾನೆಯಷ್ಟೇ ಬಾಕಿ ಇದೆ. ಉಡುಪಿ, ಕುಂದಾಪುರ, ಬೈಂದೂರು, ಕಾರವಾರ ಭಾಗದ ಜನರಿಗೆ ಅನುಕೂಲಕರ ಉತ್ತಮ ವೇಳಾಪಟ್ಟಿಯ ಹೊಸ ರೈಲಿಗಾಗಿ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಈ ಹಿಂದೆ ಬೇಡಿಕೆ ಸಲ್ಲಿಸಿತ್ತು. ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಮಂಗಳೂರಿನ ಪಡೀಲ್ ಮಾರ್ಗವಾಗಿ ಬೆಂಗಳೂರಿನಿಂದ ಗೋವಾದ ವಾಸ್ಕೋಗೆ ಸಂಚರಿಸಲಿರುವ ಹೊಸ ರೈಲು(ರೈಲು ಸಂಖ್ಯೆ: ೦೬೫೮೭-೦೬೫೮೮)ನ್ನು ಕೊಡುಗೆಯಾಗಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಯಶವಂತಪುರದಿಂದ ಪ್ರತಿದಿನ ಸಂಜೆ ೬.೪೫ಕ್ಕೆ ಹೊರಡುವ ಈ ರೈಲು ಹಾಸನ, ಸುಬ್ರಹ್ಮಣ್ಯ ಮೂಲಕ ಬೆಳಗ್ಗೆ ೨.೧೦ಕ್ಕೆ ಪುತ್ತೂರು, ೩.೩೦ಕ್ಕೆ ಪಡೀಲ್, ಬೆಳಗ್ಗೆ ೪.೫೦ ಉಡುಪಿ ಮಾರ್ಗವಾಗಿ ೧೦.೩೦ಕ್ಕೆ ವಾಸ್ಕೋಗೆ ತಲುಪಲಿದೆ. ಅದೇ ರೀತಿ ಆ ರೈಲಿನ ಮರುಪ್ರಯಾಣವು ವಾಸ್ಕೋದಿಂದ ಪ್ರತಿದಿನ ಸಂಜೆ ೪.೪೦ಕ್ಕೆ ಹೊರಟು ರಾತ್ರಿ ೧೧.೨೫ಕ್ಕೆ ಉಡುಪಿ, ೧೨.೨೦ಕ್ಕೆ ಪಡೀಲ್, ಪುತ್ತೂರು ೧೨.೫೮ಕ್ಕೆ ತಲುಪಲಿದ್ದು, ಬೆಳಗ್ಗೆ ೯ಕ್ಕೆ ಯಶವಂತಪುರವನ್ನು ತಲುಪಲಿದೆ.

 

 

 

ರೈಲ್ವೇ ಸಚಿವ ಸುರೇಶ್ ಅಂಗಡಿ ಹೊಸ ವಿಶೇಷ ರೈಲನ್ನು ಮಂಜೂರುಗೊಳಿಸಿದ ವಿಚಾರವನ್ನು ಸಂಸದೆ ಶೋಭಾ ಕರಂದ್ಲಾಜೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.