Friday, November 15, 2024
ಸುದ್ದಿ

ಫಿಲೋಮಿನಾದಲ್ಲಿ ವಿಜ್ಞಾನ ಉತ್ಸವ ‘ಅರೋರಾ 2020’ ಉದ್ಘಾಟನೆ- ಸೋಲು ಗೆಲುವಿಗೆ ಸೋಪಾನ – ಡಾ. ಜೆ ದಿನಕರ ಅಡಿಗ – ಕಹಳೆ ನ್ಯೂಸ್

ಪುತ್ತೂರು: ವಿಜ್ಞಾನದಲ್ಲಿ ಎದುರಾಗುವ ಪ್ರತಿಯೊಂದು ಸೋಲು ವಿಜ್ಞಾನಿಗಳಲ್ಲಿ ಇನ್ನಷ್ಟು ಸಂಶೋಧನೆಗೆ ಪ್ರೇರಣೆ ಕೊಡುತ್ತದೆ. ಸವಾಲುಗಳನ್ನು ಎದುರಿಸುತ್ತಾ ನಡೆಸುವ ಸಂಶೋಧನೆಗಳು ಹೊಸ ಸತ್ಯಗಳನ್ನು ಅನಾವರಣಗೊಳಿಸುತ್ತವೆ ಎಂದು  ಪುತ್ತೂರಿನ ಐಸಿಎಆರ್ ಇದರ ತೋಟಗಾರಿಕೆ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಜೆ ದಿನಕರ ಅಡಿಗ ಹೇಳಿದರು.


ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಫೆಬ್ರವರಿ13 ರಂದು ‘ಅರೋರಾ 2020’-ಅಂತರ್ ಕಾಲೇಜು ವಿಜ್ಞಾನ ಉತ್ಸವವನ್ನು ಉದ್ಘಾಟಿಸಿ, ಮಾತನಾಡಿದರು. ವಿಜ್ಞಾನವು ಅತ್ಯಂತ ರೋಚಕವಾದುದು. ಈ ಕ್ಷೇತ್ರದಲ್ಲಿ ನಡೆಸಲಾಗುವ ಸಂಶೋಧನೆಗಳು ಸಮಾಜದ ಒಳಿತಿಗೆ ಪೂರಕವಾರಬೇಕು. ಇಂತಹ ವಿಜ್ಞಾನ ಉತ್ಸವಗಳು ವಿದ್ಯಾರ್ಥಿ ಸಮುದಾಯದಲ್ಲಿ ವಿಜ್ಞಾನದ ಕುರಿತು ಇನ್ನಷ್ಟು ಆಸಕ್ತಿ ಮತ್ತು ಕುತೂಹಲವನ್ನು ಉಂಟು ಮಾಡುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿಜ್ಞಾನದ ಹಾದಿ ಸರಳ ಮತ್ತು ಸುಗಮವಲ್ಲ. ಇತ್ತೀಚ್ಛೆಗಿನ ದಿನಗಳಲ್ಲಿ ಜಗತ್ತನ್ನು ಬಾಧಿಸುತ್ತಿರುವ ಕೊರೊನಾ ವೈರಸ್ಸಿನ ಅಪಾಯವನ್ನು ಮೊದಲ ಬಾರಿ ಹೇಳಿ, ಅಂತಿಮವಾಗಿ ಅದೇ ರೋಗಕ್ಕೆ ಬಲಿಯಾದ ಚೀನಾ ದೇಶದ ವೈದ್ಯ ಡಾ| ಲಿ. ವೆನ್‍ಲಿಯಾನ್ ಜೀವನವನ್ನು ಉದಾಹರಿಸುತ್ತಾ ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಜ್ಞಾನ ಎಲ್ಲ ಕಡೆಯಿಂದ ಹರಿದು ಬರುತ್ತದೆ. ಅದನ್ನು ಸ್ವಾಂಗೀಕರಿಸುವ ಮನಸ್ಸು ನಮ್ಮದಾಗಬೇಕು. ವಿಜ್ಞಾನೋತ್ಸವಗಳು ಅಂತಹ ಮನೋಭಾವವನ್ನು ಉದ್ದೀಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.

ವೇದಿಕೆಯಲ್ಲಿ ವಿಜ್ಞಾನ ವೇದಿಕೆಯ ನಿರ್ದೇಶಕ ಎಡ್ವಿನ್ ಡಿ’ಸೋಜ ಮತ್ತು ಐಕ್ಯುಎಸಿ ಸಂಯೋಜಕ ಡಾ. ಎ ಪಿ ರಾಧಾಕೃಷ್ಣ ಉಪಸ್ಥಿತರಿದ್ದರು. ಕಾಲೇಜಿನ ವಿಜ್ಞಾನ ವಿಷಯಗಳ ಡೀನ್ ಪ್ರೊ. ಉದಯ ಕೆ, ವಿದ್ಯಾರ್ಥಿ ಸಂಯೋಜಕರಾದ ಶೈನಿ ಡಿ’ಸೋಜ ಮತ್ತು ವಿನಯ ಡಿ ಆರ್ ಸಹಕರಿಸಿದರು.

ಈ ಉತ್ಸವದಲ್ಲಿ ಆಸ್ಟ್ರೋಗ್ರಫಿ, ಫೊಟೋಜೆಟ್, ಎಸ್ಪೆರಾಂಟೊ, ಅಖ್ಯಾನಾಮ್ ಯುಫೋರಿಯಾ, ಫೇಸ್ ಫಿಯೇಸ್ಟಾ, ಕೊಲೋಕಿಯಮ್, ಎನಿಗ್ಮ ಮುಂತಾದ ಎಂಟು ರೀತಿಯ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ವಿವಿ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ 16 ತಂಡಗಳು ಪಾಲ್ಗೊಂಡಿವೆ.

ಸುಚಿತ್ರಾ ಭಟ್ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಯೋಜಕರಾದ ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿ, ರಚನಾ ಎನ್ ಆರ್ ವಂದಿಸಿದರು. ರಾಧಿಕಾ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು.