ಕಳೆದ ಫೆಬ್ರವರಿ 14, 2019ರಂದು ಕಾರ್ ಒಂದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ತುಂಬಿಕೊಂಡು ಬಂದಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರನೋರ್ವ ಕಾಶ್ಮೀರದ ಪುಲ್ವಾಮಾ ಹೆದ್ದಾರಿ ಬಳಿ ನಿಂತಿದ್ದ ಮಿಲಿಟರಿ ಸೈನಿಕರ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿ ಪರಿಣಾಮ ಈ ಸ್ಫೋಟದಲ್ಲಿ ಸುಮಾರು 50 ಕ್ಕೂ ಹೆಚ್ಚು ಜನ ಸೈನಿಕರು ಮೃತಪಟ್ಟಿದ್ದರು.
ಈ ಘಟನೆ ನಡೆದು ನಾಳೆಗೆ ಅಂದರೆ ಫೆಬ್ರವರಿ 14ಕ್ಕೆ ಒಂದು ವರ್ಷವಾಗುತ್ತದೆ. ಈ ದಾಳಿಯಿಂದ ವೀರ ಮರಣವನ್ನಪ್ಪಿದ ನಮ್ಮ ಹೆಮ್ಮೆಯ ವೀರರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಪುತ್ತೂರಿನ ‘ಅಮರ್ ಜವಾನ್ ಜ್ಯೋತಿ’ಯ ಸಮ್ಮುಖದಲ್ಲಿ ಫೆಬ್ರವರಿ 14 ಬೆಳಿಗ್ಗೆ 9:00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಖ್ಯಾತ ವಾಗ್ಮಿ ಆದರ್ಶ ಗೋಖಲೆಯವರು ಮಾತನಾಡಲಿದ್ದಾರೆ.