ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ಫೆ.17 ರಂದು ನಡೆಯಲಿದೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ -ಕಹಳೆ ನ್ಯೂಸ್
ಫೆಬ್ರವರಿ 17 ರಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಸಶಕ್ತ ಭಾರತಕ್ಕೆ ಸದೃಢ ಹೆಜ್ಜೆಗಳು ಎಂಬ ಕಾರ್ಯಕ್ರಮ, ಹನುಮಾನ್ ನಗರ ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ನಡೆಯಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ‘ಅಗತ್ಯತೆ ಅನಿವಾರ್ಯತೆ’ ಎಂಬ ಕುರಿತು ವಿಚಾರ ಸಂಕಿರಣ ಮಾಡಲಿದ್ದಾರೆ.
ಬೆಂಗಳೂರಿನ ನ್ಯಾಯವಾದಿ, ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮಾಳವಿಕಾ ಅವಿನಾಶ್ ‘ಪೌರತ್ವ ತಿದ್ದು ಪಡಿ ಕಾಯ್ದೆ ಘಟನೆಗಳ ಸುತ್ತಮುತ್ತ’ ಎಂಬ ಕುರಿತು ವಿಚಾರ ಸಂಕಿರಣ ಮಾಡಲಿದ್ದಾರೆ. ಭಾರತೀಯ ಜನತಾ ಪಕ್ಷ ಬೆಂಗಳೂರು ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ‘ಸಶಕ್ತ ಭಾರತ, ಆರ್ಥಿಕತೆ ಮತ್ತು ರಕ್ಷಣೆಯ ಪಾತ್ರ’ ಎಂಬ ಕುರಿತು ವಿಚಾರ ಸಂಕಿರಣ ಮಾಡಲಿದ್ದಾರೆ. ಚಿಂತಕರು, ವಿಮರ್ಶಕರು, ಬೆಂಗಳೂರಿನ ಆರೋಹಿ ರಿಸರ್ಚ್ ಪೌಂಡೇಶನ್‍ನ ನಿರ್ದೇಶಕರಾಗಿರುವ ಎಂ.ಎಸ್.ಚೈತ್ರ ‘ಜನಸಂಖ್ಯೆ ಲಾಭವೇ ಅಪಾಯವೇ’ ಎಂಬ ಕುರಿತು ವಿಚಾರ ಸಂಕಿರಣ ಮಾಡಲಿದ್ದಾರೆ.
ಬಳಿಕ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಪ್ರಾಧ್ಯಾಪಕರು ಮೈಸೂರು ಬಿ.ವಿ ವಸಂತ್ ಕುಮಾರ್ ‘ಬೌದ್ಧಿಕ ದಾಸ್ಯ, ಮೇಲೇಳುತ್ತಿದೆಯೇ ಭಾರತ’ ಎಂಬ ಕುರಿತು ವಿಚಾರ ಸಂಕಿರಣ ಮಾಡಲಿದ್ದಾರೆ