ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಂಗಳೂರು ಹೃದಯಭಾಗದಲ್ಲಿರುವ ಹುತಾತ್ಮ ಸೈನಿಕರ ಸ್ಮಾರಕದಲ್ಲಿ ದೇಶ ಭಕ್ತಿಯ ದೀಪ ಬೆಳಗುವ ಮೂಲಕ ಯೋಧರಿಗೆ ನಮನ – ಕಹಳೆ ನ್ಯೂಸ್
ಫೆಬ್ರವರಿ 14 , ಯುವಜನತೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಯಾವುದೋ ಅರ್ಥವಿಲ್ಲದ ಡೇಗಳ ಆಚರಣೆಯಲ್ಲಿ ಮಗ್ನರಾಗಿದ್ದ ಸಂದರ್ಭದಲ್ಲಿ ಬರಸಿಡಿಲಿನಂತಹ ಸುದ್ದಿ ಭಾರತವನ್ನು ತಲ್ಲಣಗೊಳಿಸಿತು. ಸಿಆರ್ ಪಿಎಫ್ ಯೋದರನ್ನು ಹೊತ್ತೊಯ್ಯುತಿದ್ದ ಬಸ್ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು .
ದೇಶಕ್ಕಾಗಿ ಪ್ರಾಣ ತೆತ್ತರು ವೀರರು. ಅಂದೇ ನಿರ್ಣಯಿಸಿದ್ದೆವು. ಯೌವನ ಇರುವುದು ದೇಶಪ್ರೇಮಕ್ಕೆ ಹೊರತು ದೇಹ ಪ್ರೇಮಕ್ಕಲ್ಲ. ವ್ಯರ್ಥವಾಗದು ಯೋದರ ಬಲಿದಾನ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವೆವು ಎಂದು. ಅದರಂತೆ ಬಲಿದಾನದ ಪ್ರಥಮ ವರ್ಷದ ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮಂಗಳೂರು ಹೃದಯಭಾಗದಲ್ಲಿರುವ ಹುತಾತ್ಮ ಸೈನಿಕರ ಸ್ಮಾರಕದಲ್ಲಿ ದೇಶ ಭಕ್ತಿಯ ದೀಪ ಬೆಳಗುವ ಮೂಲಕ ಯೋಧರಿಗೆ ನಮನ ಸಲ್ಲಿಸಿ ದೇಶಪ್ರೇಮಿಗಳ ದಿನವನ್ನು ಆಚರಿಸಲಾಯಿತು.
ಇದು ಇಂದಿಗೆ ಮಾತ್ರವಲ್ಲ. ಪ್ರತಿವರ್ಷ ಫೆಬ್ರವರಿ ೧೪ ದೇಶಪ್ರೇಮಿ ಗಳ ದಿನವನ್ನಾಗಿ ಆಚರಿಸುವ ಸಂಕಲ್ಪ ಮಾಡಲಾಯಿತು.