ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾಡಾಜೆ ನಿವಾಸಿ ಸಂತೋμï ಮಸ್ಕರೇನಸ್ ಅವರ ಮನೆಯಲ್ಲಿ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದ್ದು, ವಿಟ್ಲ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
8 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 28 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು, 4 ಗ್ರಾಂ ತೂಕದ 1 ಜೊತೆ ಚಿನ್ನದ ಕಿವಿಯ ಓಲೆ ಕಳವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಹಾಗೂ ಮನೆ ಕೆಲಸದ ಸಹಾಯಕ್ಕಾಗಿ ಒಡಿಶಾ ಮೂಲದ ದಿಲೀಪ್ ಮತ್ತು ಸುಶ್ಮಿತಾ ಎಂಬ ದಂಪತಿಯನ್ನು ಜನವರಿ 6 ರಂದು ಬಂಟ್ವಾಳದಿಂದ ಕರೆದುಕೊಂಡು ಬಂದು ಮನೆಯ ಪಕ್ಕದಲ್ಲಿರುವ ಕೊಠಡಿಯೊಂದನ್ನು ಅವರಿಗೆ ವಾಸ್ತವ್ಯಕ್ಕೆ ನೀಡಲಾಗಿತ್ತು. ಕೆಲಸಕ್ಕೆ ಸೇರಿ ಒಂದು ತಿಂಗಳು ಸಮೀಪಿಸುತ್ತಿದ್ದಾಗ ದಿಲೀಪ್ ತಾನು ಕೆಲಸ ಬಿಟ್ಟು ಹೋಗುವುದಾಗಿ ತಿಳಿಸಿದ್ದರಿಂದ ಅವರಿಗೆ 10,000 ರೂ. ಸಂಬಳ ನೀಡಲಾಗಿತ್ತು. ದಂಪತಿ ಫೆಬ್ರವರಿ 6ರಂದು ಮನೆಯಿಂದ ಹೊರಟಿದ್ದಾರೆ. ಫೆಬ್ರವರಿ 11ರಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಗೊತ್ತಾಗಿದೆ. ಈ ಚಿನ್ನಾಭರಣವನ್ನು ಫೆಬ್ರವರಿ 2ರಂದು ಕಪಾಟಿನಲ್ಲಿ ಇಡಲಾಗಿತ್ತು. ಇನ್ನು ಚಿನ್ನಾಭರಣವನ್ನ ದಿಲೀಪ್ – ಸುಶ್ಮಿತ ದಂಪತಿ ಕದ್ದಿರಬೇಕು ಎಂದು ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಾರೆ.