Sunday, November 17, 2024
ಸುದ್ದಿ

ರಾಷ್ಟ್ರ ಮಟ್ಟದ ಫುಟ್‍ಬಾಲ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ ಅವಳಿ ಪ್ರಶಸ್ತಿಗಳು – ಕಹಳೆ ನ್ಯೂಸ್

ಪುತ್ತೂರು: ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಮೈಸೂರು ಇದರ ಆಶ್ರಯದಲ್ಲಿ ಜರಗಿದ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಅಂತರ್ ಕಾಲೇಜು ಫುಟ್‍ಬಾಲ್ ಪಂದ್ಯಾಟದಲ್ಲಿ ಪುತ್ತೂರಿನ ಸಂತ ಫೀಲೋಮಿನಾ ಕಾಲೇಜಿನ ಪುರುಷರ ‘ಎ’ ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿದರೆ, ‘ಬಿ’ ತಂಡವು ರನ್ನರ್ಸ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ಒಟ್ಟು 28 ತಂಡಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಪಂದ್ಯಾವಳಿಯ ಪ್ರಥಮ ಸೆಮಿಫೈನಲ್‍ನಲ್ಲಿ ಫಿಲೋಮಿನಾ ‘ಬಿ’ ತಂಡವು ಮೈಸೂರಿನ ಫಿಲೋಮಿನಾ ಕಾಲೇಜು ತಂಡವನ್ನು ರೋಮಾಂಚಕ 1-0 ಗೋಲಿನಿಂದ ಮಣಿಸಿದರೆ, ಫಿಲೋಮಿನಾ ‘ಎ’ ತಂಡವು ಎನ್‍ಐಇ ಕಾಲೇಜು ತಂಡವನ್ನು 5-2 ಅಂತರದಲ್ಲಿ ಮಣಿಸಿ, ಫೈನಲ್‍ಗೆ ಪ್ರವೇಶಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿದ್ದಾಜಿದ್ದಿನಿಂದ ಕೂಡಿದ ಫೈನಲ್ ಪಂದ್ಯಾಟದಲ್ಲಿ ಒಂದೇ ಕಾಲೇಜಿನ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಿದವು. ಅಂತಿಮವಾಗಿ ಫಿಲೋಮಿನಾ ‘ಎ’ ತಂಡವು ಫಿಲೋಮಿನಾ ‘ಬಿ’ ತಂಡವನ್ನು 4-3 ಅಂತರದಿಂದ ಮಣಿಸಿ, ಚಾಂಪಿಯನ್ ಪಟ್ಟವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಫಿಲೋಮಿನಾ ‘ಬಿ’ ತಂಡವು ರನ್ನರ್ಸ್ ಅಪ್ ಪ್ರಶಸ್ತಿಗೆ ಭಾಜನವಾಯಿತು.
ಫಿಲೋಮಿನಾ ‘ಎ’ ತಂಡದ ಚಿಕ್ಕೇ ಗೌಡ ಪಂದ್ಯಾಕೂಟದ ‘ಸರ್ವಾಂಗೀಣ’ ಆಟಗಾರ ಪ್ರಶಸ್ತಿ ಪಡೆದರೆ, ಫಿಲೋಮಿನಾ ‘ಬಿ’ ತಂಡದ ಮಹಮ್ಮದ್ ಜುನೈದ್ ಪಂದ್ಯಕೂಟದ ‘ಉತ್ತಮ ಆಟಗಾರ’ ಪ್ರಶಸ್ತಿ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫಿಲೋಮಿನಾ ‘ಎ’ ತಂಡದಲ್ಲಿ ಪಾಂಡ್ಯನ್ ಎಮ್ (ನಾಯಕ), ಕಿಸು ಎಚ್ ಆರ್, ಚಿಕ್ಕೇ ಗೌಡ, ಪವನ್ ಪಿ ಆರ್, ತನ್ವೀರ್ ಪಿ ಎ, ಶರತ್ ಪಿ ಎಸ್, ಧನುಷ್ ಎನ್ ಡಿ ಮತ್ತು ಅರ್ಜುನ್ ನಾಯರ್ ಆಟಗಾರರಾಗಿದ್ದರು. ಫಿಲೋಮಿನಾ ‘ಬಿ’ ತಂಡದಲ್ಲಿ ಅರವಿಂದ್ ಎಸ್, (ನಾಯಕ), ಸಾಮ್ಯುವೆಲ್ ರಿಚರ್ಡ್, ಮಹಮ್ಮದ್ ಜುನೈದ್, ಲಾಲ್‍ಬಹದ್ದೂರ್ ಸಿ, ಸೊಲೊಮನ್ ಜೋಸೆಫ್, ಪವನ್ ಟಿ ಆರ್, ಪ್ರಥಮೇಶ್, ಜಿತಿನ್ ಕೆ ಜೆ ಮತ್ತು ಧೀರಜ್ ಶ್ರೀನಿವಾಸ್ ಆಟಗಾರಾಗಿದ್ದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಖ್ಯಮಂತ್ರಿ ಚಂದ್ರು, ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಮೈಸೂರು ಇದರ ಪ್ರಾಚಾರ್ಯ ಪ್ರೊ. ಕೆ ವಿ ಪ್ರಭಾಕರ್, ಪಂದ್ಯಾಟದ ಸಂಯೋಜಕ ಪ್ರೊ. ರವಿ ಶಂಕರ್, ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ತಿಮ್ಮೇ ಗೌಡ ಮೊದಲಾದವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.