Sunday, November 17, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಹನುಮಾನ್ ಚಾಲೀಸಾ ಪಠಣ ಸಪ್ತಾಹದ ಸಮಾರೋಪ- ಕಹಳೆ ನ್ಯೂಸ್

ಪುತ್ತೂರು: ನಮ್ಮ ಮನಸ್ಸು ಅಹಂನಿಂದ ಕೂಡಿದ್ದರೆ ಯಾವುದೇ ಪೂಜೆ, ಆಚರಣೆಗಳು ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುವುದಿಲ್ಲ.

ಕಿಡಿಯನ್ನು ನಿರಾಕರಿಸಿದರೆ ನಾಶ ಮಾಡುವಷ್ಟು ಸಾಮಥ್ರ್ಯವನ್ನು ಹೊಂದಿದೆ. ಅದೇ ಕಿಡಿಯನ್ನು ದೀಪವಾಗಿ ಬೆಳಗಿಸಿದರೆ ಸಮಾಜವನ್ನು ಬೆಳಗುವ ಶಕ್ತಿಯಾಗಿ ಮಾರ್ಪಾಡಾಗುತ್ತದೆಯೋ ಅಂತೆಯೇ ಮಂತ್ರಗಳನ್ನು ಪಠಿಸುವುದರಿಂದ ನಮ್ಮಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗಿ ಶ್ರದ್ಧೆ, ಭಕ್ತಿ ಹಾಗೂ ವರ್ಚಸ್ಸನ್ನು ಹೆಚ್ಚಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ, ಹಿಂದಿ ವಿಭಾಗ ಮತ್ತು ಹಿಂದಿ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ‘ಹನುಮಾನ್ ಚಾಲೀಸಾ’ ಪಠಣ ಸಪ್ತಾಹದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶುಕ್ರವಾರ ಮಾತನಾಡಿದರು.
ಅಕ್ಕಿಯಿಂದ ಅನ್ನವಾಗುತ್ತದೆ ಎಂದು ಹೇಳಿದವನಿಂದಾಗಿ ಇಂದು ಅನ್ನತಿನ್ನುತ್ತಾ ಇದ್ದೇವೆ. ಅಕ್ಷರದ ಬಗ್ಗೆ ಹೇಳಿದವನಿಂದಾಗಿ ಇವತ್ತು ಉತ್ತಮ ಜ್ಞಾನ ಸಿಗುತ್ತ ಇದೆ. ಹಾಗೆಯೇ ಹನುಮಂತನ ಬಗ್ಗೆ ಹಿರಿಯರು ಹೇಳಿದ್ದರಿಂದ ಅವನ ಶಕ್ತಿಯ ಬಗ್ಗೆ ಇಂದು ಜನರಿಗೆ ಅರಿವಾಗಿದೆ. ಹನುಮಂತ ತಾಳ್ಮೆ, ಶ್ರಧ್ದೆ, ಭಕ್ತಿಗೆ ಹೆಸರಾದವನು. ‘ಹನುಮಾನ್ ಚಾಲಿಸಾ’ ವನ್ನು ಪಠಿಸುವುದರಿಂದ ಶಕ್ತಿ ಲಭಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ ಮಾತನಾಡಿ, ಹನುಮಂತ ಶಕ್ತಿ, ಭಕ್ತಿ, ಶ್ರಧ್ದೆ, ಸ್ವಾಮಿ ನಿಷ್ಠೆಯ ಪ್ರತೀಕ. ಹನುಮಾನ್ ಚಾಲಿಸಾ ಪಠಣದಿಂದ ತಾಳ್ಮೆಯನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ವಿದ್ಯಾರ್ಥಿಗಳು ಭ್ರಮಾ ಲೋಕದಲ್ಲೆ ಇರುತ್ತಾರೆ, ಅವರ ಹಾದಿ ತಪ್ಪಿಸುವುದಕ್ಕಾಗಿ ಸುತ್ತಮುತ್ತ ಹಲವು ವಿಷಯಗಳಿವೆ. ನಾವು ಸಮಾಜದಲ್ಲಿರುವ ಉತ್ತಮ ವಿಷಯಗಳನ್ನು ಪಡೆದುಕೊಂಡು, ಕೆಟ್ಟ ವಿಷಯಗಳಿಂದ ದೂರವಿರಬೇಕು ಆಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಮಾನಸ ಎಂ. ಪ್ರಾರ್ಥಿಸಿ, ವೈಷ್ಣವಿ ಸ್ವಾಗತಿಸಿದರು. ರೀತೆಶ್ ನಾಯಕ್ ವಂದಿಸಿದರು. ಹಿಂದಿ ಉಪನ್ಯಾಸಕಿ ಪೂಜಾ ವೈ. ಖ. ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು