Sunday, January 19, 2025
ಸಿನಿಮಾಸುದ್ದಿ

ರಾಜಕೀಯಕ್ಕೆ ಜನಪ್ರಿಯ ತಾರೆ ಪ್ರಿಯಮಣಿ..? – Kahale News

ಕರ್ನಾಟಕ :  ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ , ಹೊಸ ಮುಖಗಳ ಸೇರ್ಪಡೆ ರಾಜ್ಯದಲ್ಲಿ ಮಾಮೂಲು. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರು ಹೊರತಲ್ಲ.

ಜಾಹೀರಾತು

ಸದ್ಯ ದಕ್ಷಿಣ ಭಾರತದಲ್ಲಿ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಕೇಳಿಬರ್ತಾ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರ್ತಾ ಇರೋ ಈ ಸುದ್ದಿ ಯ ಮೂಲವನ್ನು ಕೆದಕಿದ್ರೆ ಪ್ರಿಯಾಮಣಿ ‘ಧ್ವಜ’ ಎಂಬ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಜಕೀಯ ಸನ್ನಿವೇಶಗಳನ್ನು ಒಳಗೊಂಡಿದ್ದು, ಚಿತ್ರದಲ್ಲಿ ಜನಶಕ್ತಿ ಎಂಬ ಪಕ್ಷದ ರಾಜಕಾರಣಿಯಾಗಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಇದೇ ದೃಶ್ಯಗಳ ಚಿತ್ರೀಕರಣದ ಕೆಲವು ಫೋಟೋಗಳು ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪ್ರಿಯಾಮಣಿ ತಮ್ಮ ಟ್ವಿಟರ್ ನಲ್ಲಿ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೈ ಮುಗಿದು ಹೇಳುತ್ತಿರುವ ಫೋಟೋ ವೈರಲ್ ಆಗಿದೆ.ಹೀಗಾಗಿಯೇ ಪ್ರಿಯಾಮಣಿ ಅವರ ಶೂಟಿಂಗ್ ಫೋಟೋ ನೋಡಿದ ಕೆಲವರು ಪ್ರಿಯಮಣಿ ರಾಜಕೀಯಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು