ಪುತ್ತೂರು: ವಿಜ್ಞಾನ ವಿಷಯವನ್ನು ಅಧ್ಯಯನಗೈಯುತ್ತಿರುವ ವಿದ್ಯಾರ್ಥಿಗಳು ಸದಾ ಕುತೂಹಲಭರಿತರಾಗಿರುತ್ತಾರೆ. ಸತತ ಪ್ರಯತ್ನ ಮತ್ತು ದೃಢ ವಿಶ್ವಾಸವಿದ್ದಾಗ ನಿಯೋಜಿತ ಗುರಿ ತಲುಪಲು ಸಾಧ್ಯವಾಗುತ್ತದೆ ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಫೆಬ್ರವರಿ13 ರಂದು ಆಯೋಜಿಸಲಾದ ‘ಅರೋರಾ 2020’-ಅಂತರ್ ಕಾಲೇಜು ವಿಜ್ಞಾನ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನದ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಮಾತ್ರ ಕೌಶಲ್ಯಭರಿತರಾಗಿದೆ ಎಲ್ಲಾ ರಂಗಗಳಲ್ಲಿಯೂ ನಿಸ್ಸೀಮರಾಗಿದ್ದಾರೆ. ಪ್ರಸ್ತುತ ಬಹುರಾಷ್ಟ್ರೀಯ ಉದ್ದಿಮೆಗಳಲ್ಲಿಯೂ ಉನ್ನತ ಮಟ್ಟದ ಉದ್ಯೋಗವನ್ನು ಪಡೆಯುತ್ತಿರುವುದು ಸಂತಸದ ಸಂಗತಿ.
ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಆತ್ಮವಿಶ್ವಾಸ ಬಹಳ ಅಗತ್ಯವಿರುತ್ತದೆ ಎಂದು ಹೇಳಿ, ವಿಜೇತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ವಿಜ್ಞಾನ ವಿಷಯಗಳ ಡೀನ್ ಪ್ರೊ. ಉದಯ ಕೆ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ರೈ ಕೆ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಉತ್ಸವದಲ್ಲಿ ಮಂಗಳೂರು ವಿವಿ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ 16 ತಂಡಗಳು ಪಾಲ್ಗೊಂಡಿದ್ದವು. ‘ಅರೋರಾ 2020’ ಇದರ ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ತಂಡ ಪಡೆದುಕೊಂಡರೆ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸುಳ್ಯದ ಎನ್‍ಎಮ್‍ಸಿ ತಂಡವು ತನ್ನದಾಗಿಸಿಕೊಂಡಿತು. ಆಸ್ಟ್ರೋಗ್ರಫಿಯಲ್ಲಿ ಸುಳ್ಯದ ಎನ್‍ಎಮ್‍ಸಿ(ಪ್ರ), ಸೈಂಟ್ ಆಗ್ನೆಸ್ ಕಾಲೇಜು(ದ್ವಿ), ಫೊಟೋಜೆಟ್‍ನಲ್ಲಿ ಉಡುಪಿಯ ಪಿಪಿಸಿ(ಪ್ರ), ಶ್ರೀ ರಾಮಕುಂಜೇಶ್ವರ ಕಾಲೇಜು(ದ್ವಿ), ಎಸ್ಪೆರಾಂಟೊನಲ್ಲಿ ಸೈಂಟ್ ಆಗ್ನೆಸ್ ಕಾಲೇಜು(ಪ್ರ), ಸುಳ್ಯದ ಎನ್‍ಎಮ್‍ಸಿ(ದ್ವಿ), ಅಖ್ಯಾನಾಮ್‍ನಲ್ಲಿ ಉಡುಪಿಯ ಪಿಪಿಸಿ(ಪ್ರ), ಸೈಂಟ್ ಅಲೋಶಿಯಸ್ ಕಾಲೇಜು(ದ್ವಿ), ಯುಫೋರಿಯಾದಲ್ಲಿ ಸುಳ್ಯದ ಎನ್‍ಎಮ್‍ಸಿ(ಪ್ರ), ಸೈಂಟ್ ಅಲೋಶಿಯಸ್ ಕಾಲೇಜು(ದ್ವಿ), ಫೇಸ್ ಫಿಯೇಸ್ಟಾದಲ್ಲಿ ವಿವೇಕಾನಂದ ಕಾಲೇಜು(ಪ್ರ), ಉಡುಪಿಯ ಪಿಪಿಸಿ(ದ್ವಿ), ಕೊಲೋಕಿಯಮ್‍ನಲ್ಲಿ ಮಂಗಳೂರಿನ ಯೂನಿರ್ವಸಿಟಿ ಕಾಲೇಜು(ಪ್ರ), ಉಜಿರೆಯ ಎಸ್‍ಡಿಎಮ್ ಕಾಲೇಜು(ದ್ವಿ), ಎನಿಗ್ಮಾದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು(ಪ್ರ), ಮಂಗಳೂರಿನ ಯೂನಿರ್ವಸಿಟಿ ಕಾಲೇಜು(ದ್ವಿ) ಬಹುಮಾನ ಪಡೆದುಕೊಂಡಿದೆ.
ವಿಜ್ಞಾನ ವೇದಿಕೆಯ ನಿರ್ದೇಶಕ ಎಡ್ವಿನ್ ಡಿ’ಸೋಜ ಬಹುಮಾನ ವಿಜೇತರ ವಿವರ ಮಂಡಿಸಿದರು. ಐಕ್ಯುಎಸಿ ಸಂಯೋಜಕ ಡಾ. ಎ ಪಿ ರಾಧಾಕೃಷ್ಣ, ವಿದ್ಯಾರ್ಥಿ ಸಂಯೋಜಕರಾದ ಶೈನಿ ಡಿ’ಸೋಜ ಮತ್ತು ವಿನಯ ಡಿ ಆರ್ ಸಹಕರಿಸಿದರು.
ವಿಜ್ಞಾನ ವೇದಿಕೆಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿ, ಕಾರ್ಯದರ್ಶಿ ರಚನಾ ಎನ್ ಆರ್ ವಂದಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.