ಸುಲ್ತಾನ್ಪುರ್: ತ್ರಿವಳಿ ತಲಾಖ್ ಬಿಲ್ ಕುರಿತು ದೇಶದೆಲ್ಲೆಡೆ ಬಿಸಿ-ಬಿಸಿ ಚರ್ಚೆ ನಡೆಯುತ್ತಲೇ ಇದೆ. ಆದರೂ ತ್ರಿವಳಿ ತಲಾಖ್ ನೀಡುತ್ತಿರುವ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಪತ್ನಿಯ ಫೋನ್ ಬ್ಯುಸಿ ಬಂತೆಂದು ಪತಿ ರಿಜಿಸ್ಟರ್ ಮೂಲಕ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್ಪುರ್‌ನಲ್ಲಿ ನಡೆದಿದೆ.
ಸೌದಿಯಲ್ಲಿರುವ ಮೊಹಮದ್ ಜಬೀರ್ ಖಾನ್ ತನ್ನ ಪತ್ನಿ ಬೇರೆ ಯಾರದೋ ಜತೆ ಫೋನ್‌ನಲ್ಲಿ ತುಂಬಾ ಹೊತ್ತು ಮಾತನಾಡುತ್ತಾಳೆ, ಕೇಳಿದರೆ ಪೋನ್ ನಂಬರ್ ಕೂಡ ಮರೆ ಮಾಚಲು ಪ್ರಯತ್ನಿಸುತ್ತಾಳೆ. ಆದ್ದರಿಂದ ತಲಾಖ್ ನೀಡಿರುವುದಾಗಿ ತಿಳಿಸಿದ್ದಾನೆ.
ರಾತ್ರಿ ಹೊತ್ತು ಬೇರೆ ವ್ಯಕ್ತಿಯ ಜತೆ ತುಂಬಾ ಹೊತ್ತು ಮಾತನಾಡುತ್ತಾಳೆ, ಇದರ ಕುರಿತು ತುಂಬಾ ಸಲ ಕೇಳಿದೆ, ಆಗೆಲ್ಲಾ ಏನೇನೋ ಸಬೂಬು ಹೇಳುತ್ತಿದ್ದಳು. ಒಂದು ಕೆಟ್ಟ ವೀಡಿಯೋವನ್ನು ಬೇರೆ ವ್ಯಕ್ತಿಗೆ ಕಳುಹಿಸಿದ್ದಳು, ಅದನ್ನು ಆ ವ್ಯಕ್ತಿ ನನಗೆ ಕಳುಹಿಸಿದ್ದ. ಆದ್ದರಿಂದ ತಲಾಖ್ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ರಿಜಿಸ್ಟರ್‌ನಲ್ಲಿ ಇಬ್ಬರು ಸಾಕ್ಷಿಗಳು ಕೂಡ ಉರ್ದುವಿನಲ್ಲಿ ಸಹಿ ಹಾಕಿದ್ದಾರೆ.
ಇದೀಗ ತ್ರಿವಳಿ ತಲಾಖ್ ಸಂತ್ರಸ್ತೆ ಕನೀಜ್ ತನ್ನ ಪೋಷಕರೊಂದಿಗೆ ಬಂದು ಗಂಡ ಸುಳ್ಳು ಹೇಳಿ ತಲಾಖ್ ನೀಡಿದ್ದಾನೆ ಎಂದು ದೂರು ಕೊಟ್ಟಿದ್ದಾಳೆ. ಎಸ್ ಪಿ ಅಮಿತ್ ವರ್ಮಾ ಈ ಕುರಿತು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
ವರದಿ : ಕಹಳೆ ನ್ಯೂಸ್