Monday, November 18, 2024
ಸುದ್ದಿ

2000 – 2020ನೇ ಸಾಲಿನ ‘ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿ’ ಪಡೆದ ಸಚಿನ್ ತೆಂಡೂಲ್ಕರ್- ಕಹಳೆ ನ್ಯೂಸ್

ನವದೆಹಲಿ : ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ 2011 ಏಕದಿನ ವಿಶ್ವಕಪ್ ಗೆಲುವಿನ ಸಾಧನೆಗಾಗಿ 2000ದಿಂದ 2020ನೇ ಇಸವಿಯ ವರೆಗಿನ ‘ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜರ್ಮನಿಯ ಬರ್ಲಿನ್‌ನ ನಡೆದ ಅದ್ಧೂರಿ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವ್ಹಾ ಪ್ರಶಸ್ತಿ ನೀಡಿ ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ದೇಶವನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ಕ್ಷಣ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಚಿನ್ ತೆಂಡೂಲ್ಕರ್, 2011 ವಿಶ್ವಕಪ್ ಗೆಲುವಿನ ಕ್ಷಣಕ್ಕಾಗಿ ನಾಮ ನಿರ್ದೇಶನ ಪಡೆದಿದ್ದರು.

2000-2020 ಲಾರೆಸ್ ಪ್ರಶಸ್ತಿ ಸಾರ್ವಜನಿಕರ ಮತದಾನದಿಂದ ಆರಿಸಲ್ಪಟ್ಟ ಏಕ ಮಾತ್ರ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ಗೆದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಸಚಿನ್ ತೆಂಡೂಲ್ಕರ್, ‘ಇದು ನಿಜಕ್ಕೂ ಅದ್ಭುತ ಕ್ಷಣ. ವಿಶ್ವಕಪ್ ಗೆಲುವು ಅವಿಸ್ಮರಣೀಯ. ವಿಶ್ವಕಪ್ ನಮ್ಮ ಜೀವದಲ್ಲಿ ಪವಾಡವನ್ನೇ ಮಾಡಿದೆ. ಈಗಲೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.