ಬೀಜಿಂಗ್: ಚೀನಾದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಮತ್ತಷ್ಟು ಮಂದಿಯನ್ನು ಬಲಿಪಡೆದುಕೊಂಡಿದ್ದು, ಮೃತರ ಸಂಖ್ಯೆ 1,800ರ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 98 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 1,868ಕ್ಕೆ ಏರಿಕೆಯಾಗಿದೆ ಎಂದು ಚೀನಾದ ಆರೋಗ್ಯ ಸಮಿತಿ ಮಂಗಳವಾರ ತಿಳಿಸಿದೆ.
ಚೀನಾದಾದ್ಯಂತ ಹೊಸದಾಗಿ 1,886 ಪ್ರಕರಣಗಳು ದೃಢಪಟ್ಟಿದ್ದು, ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ 72,436ಕ್ಕೆ ಏರಿದೆ ಎಂದು ಅದು ಹೇಳಿದೆ.
ಸೋಂಕಿನಿಂದ ಈಗಾಗಲೇ 1,701 ಜನರು ಚೇತರಿಸಿಕೊಂಡಿದ್ದು, ಇದುವರೆಗೂ ಒಟ್ಟು 12,552 ಕೊರೋನ ವೈರಸ್ ಸೋಂಕು ಪೀಡಿತ ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) COVID-19 ಎಂದು ಕರೆಯಲ್ಪಡುವ ಕೊರೊನಾ ವೈರಸ್ ಸೋಂಕು ಮೊದಲ ಬಾರಿಗೆ 2019ರ ಡಿಸೆಂಬರ್ ಅಂತ್ಯದಲ್ಲಿ ಹುಬೆ ಪ್ರಾಂತ್ಯದ ವುಹಾನ್‌ನಿಂದ ಹರಡಲು ಪ್ರಾರಂಭವಾಯಿತು. ಅಂದಿನಿಂದ ಇದುವರೆಗೂ ಸುಮಾರು 20ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ವೈರಸ್ ಸೋಂಕು ವ್ಯಾಪಿಸಿದೆ.