ಆಂಧ್ರ ಪ್ರದೇಶ: ಇಂಧನ ಮುಗಿದ ಕಾರಣ ಚಾರ್ಟೆಡ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ಬೆಳಗ್ಗೆ ಅನಂತಪುರ ಜಿಲ್ಲೆಯ ಬ್ರಹ್ಮಸಮುದ್ರಂ ಮಂಡಲದ ಎರಾಡಿಕೆರಾ ಗ್ರಾಮದ ಹೊಲದಲ್ಲಿ ನಡೆದಿದೆ.
ನಾಲ್ಕು ಆಸನಗಳನ್ನು ಹೊಂದಿರುವ ಈ ವಿಮಾನದಲ್ಲಿ ಜಿಂದಾಲ್ ಸ್ಟೀಲ್ ಲಿಮಿಟೆಡ್ನ ಇಬ್ಬರು ವ್ಯಕ್ತಿಗಳು ಇದ್ದರು. ವಿಮಾನದಲ್ಲಿ ಇಂಧನ ಕಡಿಮೆಯಿದ್ದ ಕಾರಣ ಹೊಲದಲ್ಲೇ ವಿಮಾನವನ್ನು ಪೈಲಟ್ ತುರ್ತಾಗಿ ಲ್ಯಾಂಡ್ ಮಾಡಿದ್ದಾರೆ.
ಹೊಲದಲ್ಲಿ ವಿಮಾನ ಲ್ಯಾಂಡಿಂಗ್ ಆಗಿದ್ದೇ ತಡ ಸುತ್ತಮುತ್ತಲ ಗ್ರಾಮಸ್ಥರು ವಿಮಾನವನ್ನು ನೋಡಲು ಮುಗಿಬಿದ್ದಿದ್ದಾರೆ