ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮನೆ ಮಾಲೀಕನೊಬ್ಬ ಬಾಡಿಗೆಗೆ ಇದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಬಾಡಿಗೆದಾರ ಮಹಿಳೆ ಈ ಕುರಿತು ನಾಪೋಕ್ಲು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಎಮ್ಮೆಮಾಡು ಗ್ರಾಮದ ಕೆ.ಎಸ್. ಖಾದರ್ ಹಾಜಿ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದು, ಮಾಲೀಕನಿಗೆ ಊಟ ಕೊಡಲು ಹೋಗಿದ್ದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಮನೆ ಮಾಲೀಕನ ಪತ್ನಿ ಊರಿಗೆ ಹೋಗಿದ್ದು, ಪತಿಗೆ ಊಟ ಕೊಡುವಂತೆ ತಿಳಿಸಿದ್ದರು. ಅಂತೆಯೇ ಬಾಡಿಗೆದಾರ ಮಹಿಳೆ ಮಾಲೀಕನಿಗೆ ಊಟ ಕೊಡಲು ಮನೆಗೆ ಹೋದಾಗ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆನ್ನಲಾಗಿದೆ. ಆತನಿಂದ ಬಿಡಿಸಿಕೊಂಡು ಮಹಿಳೆ ಹೊರಗೆ ಓಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.