ಬಂಟ್ವಾಳ : ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಒರ್ವನನ್ನು ಬಂಧಿಸಿ, ವಾಹನ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಅರಂತಾಂಗಿ ತಾಲೂಕಿನ ಒಡಕವಾಡಿ ನಿವಾಸಿ ರಾಜಾ ಕೆ (38) ಫೆ.13 ರಂದು ಮೆಲ್ಕಾರ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಆಕ್ಟೀವ್ ಹೊಂಡಾ ಕಳವು ನಡೆಸಿದ ಬಗ್ಗೆ ಫೆ.15 ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಲ್ಲಡ್ಕ ನಿವಾಸಿ ಸಂದೇಶ ಎಂಬವರು ಅವರ ಮೆಲ್ಕಾರ್ ನಲ್ಲಿರುವ ಎಸ್.ಆರ್. ಮೊಬೈಲ್ ಅಂಗಡಿಯ ಕೆಳಗಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿತ್ತು. ಈ ದೂರಿನ ಅಧಾರದಲ್ಲಿ ಬಂಟ್ವಾಳ ನಗರ ಪೋಲೀಸರು ಪ್ರಕರಣದ ಜಾಲವನ್ನು ಕಂಡು ಹಿಡಿದು ಆರೋಪಿ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ರಾಜಾ ಸಹಿತ ವಾಹನವನ್ನು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಇಂದು ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿ ವಾಹನ ಕಳವು ಮಾಡಿದ ಬಳಿಕ ವಾಹನವನ್ನು ಮಂಗಳೂರು ಕಡೆಗೆ ಮಾರಾಟ ಮಾಡಲು ತೆರಳಿದ್ದ, ಆದರೆ ಮಂಗಳೂರು ಮಾರಾಟ ವಾಗದ ಕಾರಣ ವಾಪಾಸು ವಾಹನದ ಮೂಲಕ ಮೈಸೂರು ಕಡೆಗೆ ಮಾರಾಟ ತೆರಳುತ್ತಿದ್ದ ವೇಳೆ ದಾಸಕೋಡಿಯಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದಾನೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ದಾಸಕೋಡಿಯಲ್ಲಿ ಸಿಬ್ಬಂದಿಯವರ ಜೊತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಈತ ವಾಹನ ನಿಲ್ಲಿಸಿದೆ ಪರಾರಿಯಾಗಲು ಯತ್ನಿಸಿದಾಗ ಸಂಶಯಗೊಂಡ ಪೋಲೀಸರು ಈತನ ಬೆನ್ನಟ್ಟಿ ಹೋಗಿ ವಾಹನ ಅಡ್ಡ ಹಾಕಿ ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಡಿ.ವೈ.ಎಸ್.ಪಿ. ವೆಲಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಅವಿನಾಶ್ ಮತ್ತು ಅವರ ಸಿಬ್ಬಂದಿ ಗಳಾದ ಎ.ಎಸ್.ಐ.ಸಂಜೀವ ಕೆ. ಪ್ರೋ.ಪಿ.ಎಸ್.ಐ.ಕುಮಾರ್, ಎಚ್.ಸಿ.ಸುರೇಶ್ ಪಡಾರ್, ಪಿ.ಸಿ.ಶ್ರೀಕಾಂತ್ ಕಾರ್ಯಾಚರಣೆ ನಡೆಸಿದ್ದರು.