Tuesday, November 19, 2024
ಸುದ್ದಿ

ಮಂಗಳೂರು: ಸೈನೆಡ್‌ ಮೋಹನ್‌ನ ವಿರುದ್ಧದ 19 ನೇ ಹತ್ಯೆ ಪ್ರಕರಣ – ಜೀವಾವಧಿ ಶಿಕ್ಷೆ-ಕಹಳೆ ನ್ಯೂಸ್

ಮಂಗಳೂರು : ಕಾಸರಗೋಡಿನ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ

ಮಾಡಿ ಬಳಿಕ ಸೈನೆಡ್ ನೀಡಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಸ್ತ್ರೀ ಹಂತಕ ಸೈನೆಡ್ ಮೋಹನ್‌ನಿಗೆ ಜೀವಾವಧಿ ಶಿಕ್ಷೆ ಹಾಗೂ 55,000 ರೂಪಾಯಿ ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣದಲ್ಲಿ ಸೈನೆಡ್‌ ಮೋಹನ್‌ ಆರೋಪಿ ಎಂದು ಸಾಬೀತಾಗಿದೆ ಎಂದು ಫೆ. 11 ರಂದು ನ್ಯಾಯಾಧೀಶರಾದ ಸಯೀದುನ್ನಿಸಾ ಹೇಳಿದ್ದು 17 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದರು.

ಕೊಲೆ ಮಾಡಿದಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ, ಅಪಹರಣ ಮಾಡಿದಕ್ಕಾಗಿ 10 ವರ್ಷ ಕಠಿಣ ಸಜೆ ಹಾಗೂ 5,000 ರೂ. ದಂಡ, ಅತ್ಯಾಚಾರಕ್ಕೆ 7 ವರ್ಷ ಕಠಿಣ ಸಜೆ ಹಾಗೂ 5,000 ರೂ. ದಂಡ, ವಿಷ ಉಣಿಸಿದಕ್ಕೆ 10 ವರ್ಷ ಕಠಿಣ ಸಜೆ ಹಾಗೂ 5,000 ರೂ. ದಂಡ, ಚಿನ್ನಾಭರಣ ಸುಳಿಗೆಗೆ 5 ವರ್ಷ ಕಠಿಣ ಸಜೆ ಹಾಗೂ5,000 ರೂ. ದಂಡ, ವಿಷ ಉಣಿಸಿ ಸುಳಿಗೆ ಮಾಡಿದಕ್ಕೆ 10 ವರ್ಷ ಕಠಿಣ ಸಜೆ ಹಾಗೂ 5,000 ರೂ. ದಂಡ, ವಿವಾಹವಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಕ್ಕೆ 1 ವರ್ಷ ಕಠಿಣ ಸಜೆ, ಸಾಕ್ಷ್ಯ ನಾಶಕ್ಕಾಗಿ 7 ವರ್ಷ ಕಠಿಣ ಸಜೆ ಹಾಗೂ 5,000 ರೂ. ದಂಡ ವಿಧಿಸಲಾಗಿದೆ.

ಇದು ಸೈನೆಡ್‌ ಮೋಹನ್‌ನ 19 ನೇ ಪ್ರಕರಣವಾಗಿದ್ದು ಇನ್ನೂ ಒಂದು ಪ್ರಕರಣ ಬಾಕಿ ಉಳಿದಿದೆ.

2006 ರಲ್ಲಿ ಕಾಸರಗೋಡಿನ 23 ವರ್ಷದ ಬೀಡಿ ಕಟ್ಟುತ್ತಿದ್ದ ಯುವತಿ ತನ್ನ ಸಂಬಂಧಿಕರ ವಿವಾಹಕ್ಕೆ ಹೋಗಿದ್ದಾಗ ಅಲ್ಲಿ ಮೋಹನನ ಪರಿಚಯವಾಗಿದ್ದು ಆತ ತಾನು ಶಿಕ್ಷಕ ಹಾಗೂ ಆಕೆಯ ಜಾತಿಗೆ ಸೇರಿದವನು ಎಂದು ಪರಿಚಯಿಸಿಕೊಂಡಿದ್ದಾನೆ. ಹಾಗೆಯೇ ಆ ಬಳಿಕ ವಿವಾಹದ ಬಗ್ಗೆ ಮಾತುಕತೆ ನಡೆಸಿ ವಿವಾಹವಾಗುವುದಾಗಿ ತಿಳಿಸಿ ಒಂದು ವಾರದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದನು.

ಆ ಬಳಿಕ 2006 ಜೂನ್‌ 3 ರಂದು ಯುವತಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟ್ಟಿದ್ದಳು. ಮೋಹನ ಆಕೆಯನ್ನು ಮೈಸೂರಿನ ಲಾಡ್ಜ್‌ ಒಂದಕ್ಕೆ ಕರೆದೊಯ್ದು ಅಲ್ಲಿ ಒಂದು ರಾತ್ರಿ ಉಳಿದು ಬಳಿಕ ಮರುದಿನ ದೇವಸ್ಥಾನಕ್ಕೆ ಪೂಜೆಗೆಂದು ಕರೆದೊಯ್ದು ಬಸ್‌ ನಿಲ್ದಾಣದ ಬಳಿ ಸೈನೆಡ್‌ ನೀಡಿದ್ದ.

ಆಕೆ ಶೌಚಾಲಯಕ್ಕೆ ತೆರಳಿದ ವೇಳೆ ಅಲ್ಲೇ ಕುಸಿದು ಬಿದಿದ್ದಳು. ಮಾಹಿತಿ ತಿಳಿದ ಪೊಲೀಸ್‌ ಠಾಣೆಯ ಸಿಬ್ಬಂದಿ ಬಸವರಾಜು ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದರು.

ಇತ್ತ ಮನೆಯವರು ಯುವತಿ ನಾಪತ್ತೆಯಾದ ಕುರಿತಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು 2009 ರಲ್ಲಿ ಮೋಹನ್‌ ಬಂಧನವಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ನ್ಯಾಯಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ಪರಿಗಣಿಸಿದೆ. ಈ ಪ್ರಕರಣಕ್ಕೆ ಸಂಬಂದಿಸಿ ಈ ಹಿಂದೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ. ಎಂ. ಕ್ರಾಸ್ತಾ ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ವಾದಿಸಿದ್ದರು.