Sunday, January 19, 2025
ಸುದ್ದಿ

ಬಿಜೆಪಿ ಮುಖಂಡ ಅಶೋಕ್ ರೈ ಸಾರಥ್ಯದಲ್ಲಿ 33 ನೇ ವರ್ಷದ ಉಪ್ಪಿನಂಗಡಿ ಕಂಬಳ – ಇದು ವಿಜಯೋತ್ಸವ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪ ಭಾಗಿ – ಕಹಳೆ ನ್ಯೂಸ್

ಪುತ್ತೂರು : ಉಪ್ಪಿನಂಗಡಿಯ ಕೂಟೇಲು ನೇತ್ರಾವತಿ ನದಿ ಕಿನಾರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ 33 ನೇ ವರ್ಷದ ವಿಜಯ -ವಿಕ್ರಮ ಜೋಡುಕರೆ ಬಯಲು ಕಂಬಳವು ಫೆ. 24 ರಂದು ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ.

ಕರಾವಳಿಯ ಭಾರಿ ಜನ ಸೇರುವ ಕಂಬಳಗಳಲ್ಲಿ ಇದು ಒಂದು ಎಂಬ ಸಾರ್ವರ್ತಿಕ ಮನ್ನಣೆ ಉಪ್ಪಿನಂಗಡಿಯ ಕಂಬಳಕ್ಕೆ ಪ್ರಾಪ್ತವಾಗಿದೆ. ಕಂಬಳಕ್ಕೆ ಇದ್ದ ಪೇಟಾ ಕಂಟಕವೂ ಈ ಕೂಟದ ಕೆಲ ದಿನಗಳ ಹಿಂದೆಯಷ್ಟೇ ದೂರವಾಗಿದೆ. ಕಂಬಳದ ಕಾನೂನು ತೊಡಕುಗಳ ನಿವಾರಣೆಗೆ ಶ್ರಮಿಸಿದ ಪ್ರಮುಖರಲ್ಲಿ ಒಬ್ಬರಾಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಸಾರಥ್ಯದಲ್ಲೇ ಈ ಕೂಟವು ನಡೆಯುತ್ತಿರುವುದು ,ಹಾಗಾಗಿ ಈ ಕೂಟವೂ ವಿಜಯೋತ್ಸವದ ಕಂಬಳ ಕೂಟವಾಗಿಯೂ ಬದಲಾಗಿರುವುದು ಕಂಬಳಾಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ತುಳುವರ ವಿಜಯೋತ್ಸವದ ಕಂಬಳ – ಅಶೋಕ್ ಕುಮಾರ್ ರೈ

ಜಾಹೀರಾತು
ಜಾಹೀರಾತು
ಜಾಹೀರಾತು
ಅಶೋಕ್ ಕುಮಾರ್ ರೈ, ಕೋಡಿಂಬಾಡಿ

“ತುಳುನಾಡಿನ ಜನಪ್ರೀಯ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಕಾನೂನಿನ ವಿಘ್ನಗಳು ನಿವಾರಣೆಯಾಗುತ್ತಿರುವ ಸಂದರ್ಭದಲ್ಲಿ, ಕಂಬಳದ ಕುರಿತ ಕಾನೂನಿಗೆ ರಾಷ್ಟ್ರಪತಿಗಳು ಅಂಕಿತ ಹಾಕುವ ಸುಸಂದರ್ಭದಲ್ಲಿ ಉಪ್ಪಿನಂಗಡಿ ಕಂಬಳ ನಡೆಯುತ್ತಿರುವುದು ಒಂದು ರೀತಿಯಲ್ಲಿ ವಿಜಯೋತ್ಸವದ ಕಂಬಳ. ಈ ಕಾರಣದಿಂದ ವಿವಿಧ ವಿಶೇಷತೆಗಳೊಂದಿಗೆ ಈ ಬಾರಿಯ ಕಂಬಳವನ್ನು ಆಯೋಜಿಸಲಾಗುತ್ತಿದೆ “ಎಂದು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.

ಕಂಬದ ವಿವರ :

ಉದ್ಘಾಟನಾ ಕಾರ್ಯಕ್ರಮ :

ಫೆ:24ರಂದು ಬೆಳಗ್ಗೆ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಿಂದ ಅತಿಥಿಗಳು, ಕಂಬಳಾಭಿಮಾನಿಗಳು, ಕಂಬಳದ ಕೋಣಗಳ ವೈಭವದ ಮೆರವಣಿಗೆ ಜರಗಲಿದೆ. ಅನಂತರ ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಕಂಬಳ ಕೂಟವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮ :

ಸಂಜೆ ಸಭಾ ಕಾರ್ಯಕ್ರಮವು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.

ಬಿ.ಎಸ್. ಯಡಿಯ್ಯೂರಪ್ಪ

ಗೌರವಾನ್ವಿತ ಅತಿಥಿಗಳಾಗಿ ದ. ಕ. ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕ್ಯಾಂಪೆÇ್ಕೀ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಭಾಗವಹಿಸಲಿದ್ದಾರೆ. ಹಲವು ಮಂದಿ ಉದ್ಯಮಿಗಳು, ಜನಪ್ರತಿನಿ„ಗಳು, ಸಾಮಾಜಿಕ -ಧಾರ್ಮಿಕ ಗಣ್ಯರು ಅತಿಥಿಗಳು ಗೌರವ ಉಪಸ್ಥಿತರಿರಲಿದ್ದಾರೆ.

ಚಿನ್ನದ ಬಹುಮಾನ
ಐತಿಹಾಸಿಕ ಕಂಬಳದಲ್ಲಿ ಸುಮಾರು 150 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕನೆ ಹಲಗೆ ಅಡ್ಡ ಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ ಹಗ್ಗ ಕಿರಿಯ, ನೇಗಿಲು ಕಿರಿಯ, ನೇಗಿಲು ಕಿರಿಯ ವಿಭಾಗಗಳಲ್ಲಿ ಚಿನ್ನದ ಬಹುಮಾನ ನೀಡಲಾಗುತ್ತದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ವಿಜಯದ ಹಾದಿಯಲ್ಲಿ
ಕೇಂದ್ರ ಸರಕಾರದ ಅಡ್ವಕೇಟ್ ಜನರಲ್, ರಾಜ್ಯ ಅಡ್ವಕೇಟ್ ಜನರಲ್, ಉಪ್ಪಿನಂಗಡಿ ವಿಜಯ -ವಿಕ್ರಮ ಕಂಬಳ ಸಮಿತಿಯ ನಿರಂತರ ಹೋರಾಟದ ಕಾರಣದಿಂದ ಸುಪ್ರೀಂ ಕೋರ್ಟ್‍ಗೂ ಕಂಬಳದಲ್ಲಿ ಯಾವುದೇ ಹಿಂಸೆ ನಡೆಯುವುದಿಲ್ಲ ಎನ್ನುವುದು ಮನವರಿಕೆಯಾಗಿದೆ. ಇದೀಗ ಕಂಬಳ ಕುರಿತ ವಾದವನ್ನು 6 ತಿಂಗಳಿಗೆ ಮುಂದೂಡಿಕೆ ಮಾಡಲಾಗಿದೆ. ಕಂಬಳದ ಕುರಿತ ಕಾನೂನಿಗೂ ರಾಷ್ಟ್ರಪತಿಗಳು ಅಂಕಿತ ಹಾಕಲಿದ್ದ್ದಾರೆ. ವಿಜಯದ ಹಾದಿಯಲ್ಲಿ ಕಂಬಳವಿರುವುದರಿಂದ ವಿಶೇಷವಾಗಿ ಉಪ್ಪಿನಂಗಡಿ ಕಂಬಳವನ್ನು ನಡೆಸಲಾಗುತ್ತಿದೆ. ಅಂದು ಮಧ್ಯಾಹ್ನ 10 ಸಾವಿರ ಮಂದಿಗೆ ಅನ್ನದಾನದ ವ್ಯವ¸ಥೆಯನ್ನೂ ಮಾಡಲಾಗಿದೆ ಎಂದರು.

ಹೋರಾಟಕ್ಕೆ ಬದ್ಧ
ಜಲ್ಲಿಕಟ್ಟು ಹಾಗೂ ಕಂಬಳವನ್ನು ಒಂದೇ ರೀತಿಯಲ್ಲಿ ಪರಿಗಣಿಸದೆ ಕಾನೂನಿನಲ್ಲಿ ಪತ್ಯೇಕವಾಗಿ ವಿಚಾರಣೆ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಕಂಬಳಕ್ಕೆ ಬಂದಿರುವ ಪೂರ್ತಿ ಅಡಚಣೆಗಳನ್ನು ನಿವಾರಣೆ ಮಾಡುವವರೆಗೂ ಉಪ್ಪಿನಂಗಡಿ ವಿಜಯ – ವಿಕ್ರಮ ಸಮಿತಿ ಹೋರಾಟ ನಡೆಸಲಿದೆ ಎಂದು ಅಧ್ಯಕ್ಷ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ ವಿಜಯ -ವಿಕ್ರಮ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕೋಶಾ„ಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಲು ಉಪಸ್ಥಿತರಿದ್ದರು.

ವರದಿ : ಕಹಳೆ ನ್ಯೂಸ್