ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಮತ್ತು ರಕ್ಷಕ ಶಿಕ್ಷಕ ಸಂಘ ಇದರ ಜಂಟಿ ಆಶ್ರಯದಲ್ಲಿ ಹಿರಿಯ ವಿದ್ಯಾರ್ಥಿಗಳು, ವಿದ್ಯಾಥಿಗಳ ರಕ್ಷಕರಿಗೆ ಫೆಬ್ರವರಿ 23 ರಂದು ಆದಿತ್ಯವಾರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕಾಲೇಜು ಕ್ರೀಡಾಂಗಣದಲ್ಲಿ ಬೆಳಿಗ್ಗೆ ಘಂಟೆ9 ಕ್ಕೆ ಇದರ ಉದ್ಘಾಟನೆಯು ನಡೆಯಲಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿಯ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೋಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅದ್ಯಕ್ಷತೆ ವಹಿಸಲಿರುವರು.
ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್, ಬ್ಯಾಡ್‍ಮಿಂಟನ್, ಶಾಟ್‍ಪುಟ್, 40 ವರ್ಷದೊಳಗಿನವರಿಗೆ 100 ಮೀಟರ್ ಓಟ, 40 ವರ್ಷ ಮೇಲ್ಪಟ್ಟವರಿಗೆ 50 ಮೀಟರ್ ಓಟ ಮತ್ತು ವಾಕ್ ರೇಸ್ ಹಾಗೂ ಮಹಿಳೆಯರಿಗೆ ತ್ರೋಬಾಲ್, ಬ್ಯಾಡ್‍ಮಿಂಟನ್, ಶಾಟ್ ಪುಟ್, 40 ವರ್ಷದೊಳಗಿನವರಿಗೆ 100 ಮೀಟರ್ ಓಟ ಮತ್ತು 40 ವರ್ಷ ಮೇಲ್ಪಟ್ಟವರಿಗೆ 50 ಮೀಟರ್ ಓಟ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಈ ಕ್ರೀಡಾಕೂಟವನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ ಜೆ ರೈ, ಕಾರ್ಯದರ್ಶಿ ಡಾ| ಕೆ. ಚಂದ್ರಶೇಖರ್, ಖಜಾಂಜಿ ತೇಜಸ್ವಿ ಭಟ್ ಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಣ್ಣ ರೈ, ಕಾರ್ಯದರ್ಶಿ ಪ್ರಶಾಂತ್ ರೈ, ಖಜಾಂಜಿ ಪ್ರೇಮಲತಾ ಕೆ ಸಂಯೋಜಿಸಲಿದ್ದಾರೆ.
ಈ ಕೂಟದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ(919945174771), ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ(919945385290), ಖಜಾಂಜಿ ತೇಜಸ್ವಿ ಭಟ್ ಕೆ(918197807074) ಇವರಲ್ಲಿ ಫೆಬ್ರವರಿ 22 ರೊಳಗೆ ದಾಖಲಿಸಿಕೊಳ್ಳಬೇಕೆಂದು ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.