ಎಡಪಂಥೀಯ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿ.ಹಿಂ.ಪ ಬಜರಂಗದಳ ಮಂಗಳೂರು ಇವರಿಂದ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ- ಕಹಳೆ ನ್ಯೂಸ್
ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ಇದರ ವತಿಯಿಂದ ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ CAA ವಿರೋಧಿಸಿ ನಡೆದ ಸಭೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ದೇಶ ದ್ರೋಹಿ ಮಹಿಳೆ ಅಮೂಲ್ಯ ಲಿಯೋನ್ ಮತ್ತು ಸಭೆಯನ್ನು ಆಯೋಜಿಸಿದ ಮತಾಂಧ ಸಂಘಟನೆ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಹಾಗೂ ಮತ್ತವರ ಸಹಯೋಗಿ ಎಡಪಂಥೀಯರ ವಿರುದ್ಧ ದೇಶದ್ರೋಹದ ಆಧಾರದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಗಳೂರು ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಯಿತು.