Recent Posts

Monday, January 27, 2025
ಸುದ್ದಿ

ಶ್ರೀ ಗುರೂಜಿ ಜನ್ಮದಿನಾಚರಣೆಯ ನಿಮಿತ್ತ ಭಾರತಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ -19.2.2020 – ಕಹಳೆ ನ್ಯೂಸ್

ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘಚಾಲಕ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಇವರ ಜನ್ಮದಿನದ ಅಂಗವಾಗಿ ಶಿಶುಮಂದಿರ ಹಾಗೂ ಪೂರ್ವಗುರುಕುಲದ ಪುಟಾಣಿಗಳ ಪ್ರತಿಭಾದಿನೋತ್ಸವ, ಭಾರತಮಾತಾ ಪೂಜನ್, ಸಾಮೂಹಿಕ ಸಾಮರಸ್ಯ ಸಹಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೌಢಶಾಲಾ ಮಾತಾಜಿ ಸೌಮ್ಯ ಶ್ರೀ ಗೂರೂಜಿಯವರ ಜೀವನ ಸಂಸ್ಮರಣೆಯನ್ನು ಮಾಡಿದರು. ಶಿಶುಮಂದಿರ ಮತ್ತು ಪೂರ್ವಗುರುಕುಲದ ಮಕ್ಕಳು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಸಭಾಕಾರ್ಯಕ್ರಮದ ನಂತರ ಸಾಮರಸ್ಯ ಸಹಭೋಜನ ನೆರವೇರಿತು. ವಿದ್ಯಾಕೇಂದ್ರದ ಸುತ್ತಮುತ್ತಲಿನ 236 ಮನೆಗಳಿಂದ ಅನ್ನ, 254 ಮನೆಗಳಿಂದ ಪಲ್ಯ, 279 ಮನೆಗಳಿಂದ ಪಾಯಸ, 200ಮನೆಗಳಿಂದ ಕೊಬ್ಬರಿ ಮಿಠಾಯಿಗಳನ್ನು, 100 ಮನೆಗಳಿಂದ ತೆಂಗಿನಕಾಯಿ, 25 ಮನೆಗಳಿಂದ ತರಕಾರಿ, 51 ಮನೆಗಳಿಂದ ಉಪ್ಪಿನಕಾಯಿ, 150 ಮನೆಗಳಿಂದ ಬಾಳೆ ಎಲೆ, 40 ಮನೆಗಳಿಂದ ಮಜ್ಜಿಗೆ ತಂದು ವಿದ್ಯಾರ್ಥಿಗಳು ಪೋಷಕರು ಸಹಕರಿಸಿದರು. ಮಾತೆಯರು ತಯಾರಿಸಿ ತಂದಿದ್ದ ಭೋಜನವನ್ನು ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೆ ಬಡಿಸಿಸಲಾಯಿತು. ಸೇರಿರುವವರೆಲ್ಲರೂ ಒಟ್ಟಿಗೆ ಕುಳಿತು ಸಹಭೋಜನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ 2000ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ|| ಅಶ್ವಿನ್ ಬಾಳಿಗಾ ಮಕ್ಕಳ ತಜ್ಞರು, ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಡಾ|| ಕಮಲಾ ಭಟ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಸಾಂಸ್ಕøತಿಕ ಕಾರ್ಯಕ್ರಮವನ್ನು ಸಂಪ್ರಿಯಾ ಕುಶಾಲಪ್ಪ ಅಮ್ಟೂರು ನಿರ್ವಹಿಸಿದರು, ಸಭಾ ಕಾರ್ಯಕ್ರಮವನ್ನು ವಿದ್ಯಾ ಜಯರಾಮ್ ನಿರೂಪಿಸಿ, ಸೌಮ್ಯ ಜಯರಾಮ್ ಸ್ವಾಗತಿಸಿ, ಶಿಲ್ಪಾ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು