Sunday, January 26, 2025
ಸುದ್ದಿ

ಫಿಲೋಮಿನಾದಲ್ಲಿ ಗಣಿತಶಾಸ್ತ್ರ ಎಂಎಸ್ಸಿ ರ‍್ಯಾಂಕು ವಿಜೇತೆಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಗುಣಾತ್ಮಕ ಶಿಕ್ಷಣವನ್ನು ನೀಡುವ ಶಿಕ್ಷಣ ಸಂಸ್ಥೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತವೆ. ಶಿಕ್ಷಣಾಥಿಗಳು ಪರ‍್ಣ ಪ್ರಮಾಣದ ಆಸಕ್ತಿ ಮತ್ತು ಸತತ ಪರಿಶ್ರಮವನ್ನು ಹೊಂದಿರಬೇಕು. ಇದು ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಮಂಗಳೂರು ವಿವಿಯ ಗಣಿತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ| ಎಸ್ ಪರಮೇಶ್ವರ ಭಟ್ ಹೇಳಿದರು.


ಮಂಗಳೂರು ವಿವಿಯು ೨೦೧೯ರ ಮೇ ತಿಂಗಳಲ್ಲಿ ನಡೆಸಿದ ಎಂಎಸ್ಸಿ ಗಣಿತಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕು ಪಡೆದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ವಿದ್ಯರ‍್ಥಿನಿ ಚೈತ್ರಾ ಬಿ ಜೆ ಇವರಿಗೆ ಸ್ನಾತಕೋತ್ತರ ವಿಭಾಗ ಮತ್ತು ಐಕ್ಯುಎಸಿ ವತಿಯಿಂದ ಪಿಜಿ ಸಭಾಂಗಣದಲ್ಲಿ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಗಣಿತಶಾಸ್ತ್ರದ ಮೂಲಭೂತ ಜ್ಞಾನವು ಎಲ್ಲಾ ಕೇತ್ರಗಳಲ್ಲಿಯೂ ಅಗತ್ಯವಿದೆ. ಇದರ ಪರಿಪರ‍್ಣ ಅಧ್ಯಯನಕ್ಕೆ ಆಸಕ್ತಿ ಬಹಳ ಮುಖ್ಯ. ರ‍್ಯಾಂಕು ಗಳಿಕೆಯಂತಹ ಮಹತ್ವದ ಸಾಧನೆಗೆ ನಿರಂತರ ಅಧ್ಯಯನದ ಅಗತ್ಯವಿದೆ. ಕಲಿಕೆಗೆ ಪೂರಕವಾಗಿ ಒದಗಿಸಲಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿ, ರ‍್ಯಾಂಕು ವಿಜೇತೆಯನ್ನು ಅಭಿನಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದಲ್ಲಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನರ‍್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಯಶಸ್ಸು ಅನ್ನುವುದು ನಿರಂತರ ಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನಕ್ಕೆ ದೊರಕುವ ಫಲ. ಉನ್ನತ ಮಟ್ಟದ ಸಾಧನೆಗೆ ಸಂಸ್ಥೆಗಿಂತಲೂ ಬದ್ಧತೆಯುಳ್ಳ ಶಿಕ್ಷಕರ ಪಾತ್ರವೇ ಮುಖ್ಯ. ಪ್ರಸ್ತುತ ವಿದ್ಯರ‍್ಥಿಗಳ ಸಾಧನೆಯನ್ನು ನರ‍್ಧರಿಸುವಾಗ ಪ್ರಾಮಾಣಿಕತೆಯ ಅಂಶ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ. ಶೈಕ್ಷಣಿಕ ಸಾಧಕರನ್ನು ಗುರುತಿಸುವಾಗ ವಿದ್ಯರ‍್ಥಿಗಳು ಶಿಕ್ಷಣ ಪಡೆದ ಸಂಸ್ಥೆ ಯಾವುದು ಎಂಬ ಚಿಂತನೆಯನ್ನು ಮಾಡುವುದು ಸರಿಯಲ್ಲ ಎಂದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚರ‍್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಸಾಧಕರನ್ನು ಗುರುತಿಸಿ, ಸಮ್ಮಾನಿಸುವುದರಿಂದ ಇತರ ವಿದ್ಯರ‍್ಥಿಗಳಿಗೆ ಪ್ರೇರಣೆ ದೊರೆಯುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನಾತಕ ಪದವಿಯ ಬಳಿಕ ಸ್ನಾತಕೋತ್ತರ ಕರ‍್ಸಿನ ಆಯ್ಕೆಯು ಉದ್ಯೋಗವಕಾಶವನ್ನು ಅವಲಂಬಿಸಿದೆ ಎಂದು ಹೇಳಿ, ರ‍್ಯಾಂಕು ವಿಜೇತೆಗೆ ಅಭಿನಂದನೆಯನ್ನು ಸಲ್ಲಿಸಿದರು.

ವಿಭಾಗ ಸಂಯೋಜಕ ಪ್ರೊ. ಗಣೇಶ್ ಭಟ್ ಮಾತನಾಡಿ, ಗಣಿತಶಾಸ್ತ್ರ ಸ್ನಾತಕೋತ್ತರ ಪದವೀಧರರಿಗೆ ವೃತ್ತಿ ಬದುಕಿನಲ್ಲಿ ವಿಪುಲ ಅವಕಾಶಗಳಿವೆ. ಈ ವಿಭಾಗದಲ್ಲಿ ಅಧ್ಯಯನ ನಡೆಸಿ, ಪದವಿ ಗಳಿಸಿದವರು ಬಹಳಷ್ಟು ಯಶಸ್ಸನ್ನು ಕಂಡಿದ್ದಾರೆ. ಪ್ರಥಮ ರ‍್ಯಾಂಕು ಗಳಿಸುವ ಮೂಲಕ ವಿಭಾಗದ ಕರ‍್ತಿಯನ್ನು ಎತ್ತರಕ್ಕೆ ಕೊಂಡೊಯ್ದ ಚೈತ್ರಾ ಬಿ ಜೆ ಇವರ ಸಾಧನೆಯಿಂದ ಇತರ ವಿದ್ಯರ‍್ಥಿಗಳು ಪ್ರೇರಿತರಾಗಬೇಕು ಎಂದು ಹೇಳಿ, ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿದ ಚೈತ್ರಾ ಬಿ ಜೆ ಮಾತನಾಡಿ, ಕಲಿಕೆ ಅನ್ನುವುದು ಒಂದು ನಿರಂತರ ಪ್ರಕ್ರಿಯೆ. ಉತ್ತಮ ಕಲಿಕೆಗೆ ಉತ್ತಮ ಕೇಳುಗನಾಗಿರಬೇಕು. ಫಿಲೋಮಿನಾ ಅನ್ನುವುದು ಗುಣಾತ್ಮಕ ಶಿಕ್ಷಣಕ್ಕೆ ಇನ್ನೊಂದು ಹೆಸರು. ಸಾಧನೆಯನ್ನು ನರ‍್ಧರಿಸಲು ಸರ‍್ಪಕ ಮಾನದಂಡದ ಅಗತ್ಯವಿದೆ. ವಿದ್ಯರ‍್ಥಿ ಬದುಕಿನಲ್ಲಿ ಆಸಕ್ತಿ, ಆತ್ಮವಿಶ್ವಾಸ, ವಿನಯಶೀಲತೆ, ರ‍್ಪಣಾಮನೋಭಾವ, ಪರಿಶ್ರಮ ಮೊದಲಾದ ಅಂಶಗಳು ಅತೀ ಅಗತ್ಯ ಎಂದು ಹೇಳಿ, ಸಾಧನೆಯ ಹಂತದಲ್ಲಿ ಸ್ಪಂದನೆ ನೀಡಿದ ಸಂಯೋಜಕರು ಮತ್ತು ಪ್ರಾಧ್ಯಾಪಕ ವೃಂದದವರನ್ನು ಸ್ಮರಿಸಿದರು.

ಕರ‍್ಯಕ್ರಮದಲ್ಲಿ ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅನುಷಾ ಎಲ್, ಕರ‍್ತಿಕ್ ಕೆ ಮತ್ತು ಮೋಹನ್ ರಾಜ್ ಎಸ್ ಉಪಸ್ಥಿತರಿದ್ದರು.

ಕ್ಷಮಾ ಮತ್ತು ಕವನ ಪ್ರರ‍್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ವೃಕ್ಷರ‍್ಧನ ಹೆಬ್ಬಾರ್ ಎನ್ ಸ್ವಾಗತಿಸಿ, ವೈಷ್ಣವಿ ಸಿ ವಂದಿಸಿದರು. ಪಲ್ಲವಿ ಪಿ ಕರ‍್ಯಕ್ರಮ ನಿರೂಪಿಸಿದರು.