Saturday, January 25, 2025
ಸುದ್ದಿ

ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ ಬದಲಿಗೆ ವಿವೇಕ, ಪ್ರಜ್ಞೆ, ಬುದ್ದಿವಂತಿಕೆ ,ಜ್ಞಾನ ತಿಳುವಳಿಕೆಗಳನ್ನು ಒಳಗೊಂಡಿದೆ. ವಿದ್ಯೆ, ಬುದ್ಧಿ, ಸಂಗೀತ ಮತ್ತು ಕಲೆ ಸಂಸ್ಕøತಿಯ ಪ್ರತೀಕವಾಗಿರುವ ಭಾರತೀಯ ದೇವತೆ ಸರಸ್ವತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪೂಜಿಸಬೇಕು ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಆಯೋಜಿಸಲಾದ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು. ಕ್ಷಣ ಎಂದರೆ ಓದು , ಬರಹ, ಅಂಕ ಗಳಿಸುವುದಕ್ಕೆ ಸೀಮಿತವಾಗಿರದೆ ಧರ್ಮ , ಸಂಸ್ಕ್ರತಿ, ಜೀವನ ಮೌಲ್ಯವನ್ನು ಜೋಡಿಸಿದರೆ ಮಾತ್ರ ಒಬ್ಬ ವಿದ್ಯಾರ್ಥಿ ಸಮಾಜಕ್ಕೆ ಋಣಿಯಾಗಿರುತ್ತಾನೆ. ಉತ್ತಮ ಮಾನವನಾಗಲು ಹಣವಿಲ್ಲದೆ ಹೋದರೂ ಸದ್ಗುಣಗಳು ಅಗತ್ಯವಾಗಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ದೇವತೆಗಳನ್ನು ಸ್ತುತಿಸುವ ಮತ್ತು ಪ್ರಕೃತಿಯನ್ನು ಆರಾಧಿಸುವ ಮನಸ್ಸು ನಮ್ಮದಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಹೆತ್ತವರಿಗೆ ಮತ್ತು ಗುರುಗಳಿಗೆ ಅಗೌರವದಿಂದ ವರ್ತಿಸಬಾರದು. ವಿದ್ಯಾರ್ಥಿಯು ಬೆಳಗಬೇಕಾದರೆ ತನ್ನೊಳಗಿರುವ ಅಂತ:ಶಕ್ತಿಯನ್ನು ಪ್ರಕಟಪಡಿಸಬೇಕು. ಇದಕ್ಕೆ ವಿದ್ಯಾಧಿದೇವತೆಯಾದ ಸರಸ್ವತಿಯ ಪೂರ್ಣನುಗ್ರಹ ಅತ್ಯಗತ್ಯ. ಎಂದರು.

ದ್ವಿತೀಯ ಪಿಯುಸಿಯ ಸುಮಾರು 1000 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಪೂಜಾವಿಧಿಗಳು ನೇರವೇರಿದವು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯೆ ವತ್ಸಲಾರಾಜ್ಞಿ, ರವಿ ಮುಂಗ್ಲಿಮನೆ, ಪ್ರಾಂಶುಪಾಲ ಡಾ| ಸಿ.ಕೆ. ಮಂಜುನಾಥ್ ,ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ, ವಿದ್ಯಾರ್ಥಿ ಸಮೂಹ ಹಾಜರಿದ್ದು ದೇವರ ಕೃಪೆಗೆ ಪಾತ್ರರಾದರು. ದೇವರ ಅನುಗ್ರಹದ ಸಂಕೇತವಾದ ಶ್ರೀರಕ್ಷೆಯನ್ನು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು