Friday, January 24, 2025
ಸುದ್ದಿ

7ನೇ ತರಗತಿಯ ವಿಧ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ – ಆರೋಪಿಯನ್ನ ಬಂಧಿಸಿದ ವಿಟ್ಲ ಪೊಲೀಸರು – ಕಹಳೆ ನ್ಯೂಸ್

7ನೇ ತರಗತಿಯ ವಿಧ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ ಹಿನ್ನಲೆಯಲ್ಲಿ, ಆರೋಪಿಯನ್ನ ಬಂಧಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದಲ್ಲಿ ನಡೆದಿದೆ.

ಪುಣಚ ಗ್ರಾಮದ ನಿವಾಸಿಯಾಗಿರುವ ಅಪ್ರಾಪ್ತ ಪ್ರಾಯದ ಸಂತ್ರಸ್ಥ ಬಾಲಕಿಯು 7ನೇ ತರಗತಿಯ ವಿಧ್ಯಾರ್ಥಿನಿಯಾಗಿದ್ದು, ಆಕೆಯನ್ನು ಅದೇ ಗ್ರಾಮದ ಮನೋಹರ ಎಂಬಾತನು ಸುಮಾರು ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ ಪೆಬ್ರವರಿ 2 ರಂದು ಸಂತ್ರಸ್ಥ ಬಾಲಕಿಯು ಪರಿಯಾಲ್ತಡ್ಕ ಪೇಟೆಗೆ ಹೋಗಿ ಸಾಮಾಗ್ರಿಗಳನ್ನು ತೆಗೆದುಕೊಂಡು, ಪುಣಚ ಗ್ರಾಮದ ತೋರಣಕಟ್ಟೆ ಎಂಬಲ್ಲಿ ಒಬ್ಬಳೇ ನಿಂತಿರುವಾಗ ಆರೋಪಿಯು ಮೋಟಾರ್ ಸೈಕಲ್‌ನಲ್ಲಿ ಬಂದು ಬಾಲಕಿಗೆ ಕಿರುಕುಳ ನೀಡಿದ್ದಾನೆ, ಈ ಹಿನ್ನಲೆಯಲ್ಲಿ ಬಾಲಕಿಯ ಪಾಲಕರು ನಿನ್ನೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದು, ಆರೋಪಿಯ ವಿರುದ್ಧ ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು