ಕಂಬಳ ವೀರ ಶ್ರೀನಿವಾಸಗೌಡ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಕಂಬಳ ಇತಿಹಾಸದಲ್ಲಿಯೇ ಒಂದೇ ವರ್ಷ 39 ಚಿನ್ನದ ಪದಕಗಳನ್ನು ಗಳಿಸಿದ ಶ್ರೀನಿವಾಸ ಗೌಡ ದಾಖಲೆ ನಿರ್ಮಿಸಿದ್ದಾರೆ.
ಇಂದು ನಡೆದ ಕಂಬಳದಲ್ಲಿ 4 ಚಿನ್ನದ ಪದಕ ಗೆದ್ದಿದ್ದಾರೆ. ಕೇರಳದ ಮಂಜೇಶ್ವರ ಸಮೀಪದ ಪೈವಳಿಕೆ ಬೊಳಂಗಳ ಗ್ರಾಮದಲ್ಲಿ ಆಯೋಜಿಸಿದ್ದ ಕಂಬಳದಲ್ಲಿ ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ ಶ್ರೀನಿವಾಸಗೌಡ ಚಿನ್ನದ ಪದಕ ಗಳಿಸಿದ್ದಾರೆ.
ಈ ಮೂಲಕ ಒಂದೇ ವರ್ಷದಲ್ಲಿ 39 ಚಿನ್ನ ಗಳಿಸಿ ದಾಖಲೆ ಬರೆದಿದ್ದಾರೆ. ಮಿಂಚಿನ ಓಟದ ಶ್ರೀನಿವಾಸ ಗೌಡ ಕಂಬಳ ಓಟದಲ್ಲಿ ಅತಿವೇಗದ ದಾಖಲೆ ಬರೆದಿದ್ದಾರೆ.