ಹಿಂದೂ ಧರ್ಮಕ್ಕೆ ಎಂದೂ ಗಂಡಾಂತರವಿಲ್ಲ, ಈಗಲೂ ಗಂಡಾಂತರ ಬಂದಿಲ್ಲ, ಮುಂದೆಯೂ ಬರುವುದಿಲ್ಲ : ಸಿ.ಎಂ.ಇಬ್ರಾಹಿಂ-ಕಹಳೆ ನ್ಯೂಸ್
ಬಳ್ಳಾರಿ : ಪ್ರಧಾನಿ ಮೋದಿ ಬಂದ ಮೇಲೆ ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿದೆ. ಹಿಂದೂ ಧರ್ಮಕ್ಕೆ ಎಂದೂ ಗಂಡಾಂತರವಿರಲಿಲ್ಲ . ಈಗಲೂ ಗಂಡಾಂತರ ಬಂದಿಲ್ಲ, ಮುಂದೆಯೂ ಬರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಸಂಡೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿದೆ ಎಂದು ಬಿಜೆಪಿ ಮುಖಂಡ ಸಂಬೀತ್ ಪಾತ್ರ ಹೇಳುತ್ತಾರೆ. ಮೊಘಲರು, ಬ್ರಿಟಿಷರು, ಕಾಂಗ್ರೆಸ್ ಆಡಳಿತ ನಡೆಸಿದಾಗ ಗಂಡಾಂತರ ಬರಲಿಲ್ಲ. ಇದೀಗ ಮೋದಿ ಬಂದ ಮೇಲೆ ಗಂಡಾಂತರ ಬಂದಿದೆ. ಹಿಂದೂ ಧರ್ಮಕ್ಕೆ ಎಂದೂ ಗಂಡಾಂತರವಿರಲಿಲ್ಲ . ಈಗಲೂ ಗಂಡಾಂತರ ಬಂದಿಲ್ಲ, ಮುಂದೆಯೂ ಬರುವುದಿಲ್ಲ ಎಂದು ಹೇಳಿದರು.
ಇನ್ನು ದೇಶದ್ರೋಹ ಹೇಳಿಕೆ ನೀಡುವುದು ಕೆಟ್ಟದ್ದು. ನಾವು ಹೇಳುವ ಮುನ್ನ ಯೋಚಿಸಬೇಕು. ಯೋಚನೆ ಮಾಡಿ ಹೇಳಿಕೆ ನೀಡಬೇಕು. ನನ್ನ ರಾಜಕೀಯ ಇತಿಹಾಸದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ನೋಡಿರಲಿಲ್ಲ ಎಂದರು. ಇನ್ನು ಓಟು ಬ್ಯಾಂಕ್ ರಾಜಕಾರಣ ಮಾಡುವುದು ಬಿಡಿ. 20 ಪರ್ಸೆಂಟ್ ಇರುವ ನಾವು ಓಟು ಬ್ಯಾಂಕ್ ಮಾಡುತ್ತಿಲ್ಲ. 80 ಪರ್ಸೆಂಟ್ ಇರುವವರು ಓಟು ಬ್ಯಾಂಕ್ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಗೆ ಎನ್ ಆರ್ ಸಿ, ಸಿಎಎ ತೆಗೆಯುವ ಯೋಚನೆ ಇಲ್ಲ. ಯಡಿಯೂರಪ್ಪ ಹೆಸರಿಗೆ ಮಾತ್ರ ಮುಖ್ಯಮಂತ್ರಿಯಾಗಿ ಸುಮ್ಮನೆ ತಿರುಗಾಡುತ್ತಿದ್ದಾರೆ. ನಮ್ಮ ಪಾಲಿನ ತೆರಿಗೆಯನ್ನು ಕೇಂದ್ರ ಕೊಡುತ್ತಿಲ್ಲ. ಮಾತನಾಡಿದರೆ ರಾಮ ರಾಮ ಎನ್ನುತ್ತಾರೆಂದು ಹರಿಹಾಯ್ದರು.
ಇದೇ ವೇಳೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಟ್ರಂಪ್ ಬರುತ್ತಿರುವುದು ಗುಜರಾತ್ ಗೋಡೆ ನೋಡಲು ಅಲ್ಲ. ವಿದೇಶಿಯರದ್ದು ಅಂತಿದ್ದರಲ್ಲ ಅದೇ ತಾಜ್ ಮಹಲ್ಅನ್ನು ಇವರು ತೋರಿಸುತ್ತಿದ್ದಾರೆ. ಟ್ರಂಪ್ಗೆ ಸಿಎಎ, ಎನ್ಆರ್ಸಿ, ಎನ್‌ಪಿಆರ್ ಬದಲು ಬೆಂಗಳೂರಿನ ಇನ್ಪೋಸಿಸ್, ಐಟಿಬಿಟಿ ಬಗ್ಗೆ ತೋರಿಸಬೇಕಾಗಿತ್ತು. ಇದರಿಂದ ಏನಾಗಬೇಕು ಎಂದು ತೋರಿಸಬೇಕಿತ್ತು. ಆದರೆ ಇದು ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು….