ರಾಜರಾಜೇಶ್ವರಿನಗರದಲ್ಲಿ ಹರ್ಷಿತಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆತ್ಮಹತ್ಯೆಗೂ ಮುನ್ನ ಹರ್ಷಿತಾಗೆ ಕರೆಮಾಡಿದ್ದ ಡಾ.ರೇವಂತ್-ಕಹಳೆ ನ್ಯೂಸ್
ಬೆಂಗಳೂರು : ರಾಜರಾಜೇಶ್ವರಿನಗರದಲ್ಲಿ ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ವಿಚಾರಣೆ ವೇಳೆ, ಹರ್ಷಿತಾ ಹಾಗೂ ಡಾ.ರೇವಂತ್ ನಡುವಣ ಅಕ್ರಮ ಸಂಬಂಧ ಬಯಲಾಗಿದೆ. ಅಲ್ಲದೇ, ಆತ್ಮಹತ್ಯೆಗೂ ಮುನ್ನ ಹರ್ಷಿತಾಗೆ ಡಾ.ರೇವಂತ್ ಕರೆಮಾಡಿದ್ದು ಬಹಿರಂಗವಾಗಿದೆ.
ಮದುವೆಗೂ ಮುನ್ನ ರೇವಂತ್ ಹಾಗೂ ಹರ್ಷಿತಾ ಅಕ್ರಮ ಸಂಬಂಧ ಹೊಂದಿದ್ದರು. ಆ ಬಳಿಕ ಇಬ್ಬರೂ ಬೇರೆಬೇರೆ ಅವರನ್ನು ವಿವಾಹವಾಗಿದ್ದರು. ಇನ್ನು ಮದುವರೆಗೂ ಮುನ್ನ ಹರ್ಷಿತಾ ಹಾಗೂ ಸುಧೀಂದ್ರ ಇಬ್ಬರೂ ಒಟ್ಟಿಗೆ ಕಡೂರಿನಲ್ಲಿ ಮನೆ ಮಾಡಿ ವಾಸವಾಗಿದ್ದರು. ಮದುವೆ ಬಳಿಕ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಬಂದು ನೆಲೆಸಿದ್ದರು. ಡಾ.ರೇವಂತ್ ಹಾಗೂ ಹರ್ಷಿತಾ ಇಬ್ಬರೂ ಮದುವೆಯ ಬಳಿಕವೂ ಅಕ್ರಮ ಸಂಬಂಧ ಮುಂದುವರೆಸಿದ್ದರು.
ಇನ್ನು ತಮ್ಮ ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪತ್ನಿ ಕವಿತಾಳನ್ನು ಫ್ಲ್ಯಾನ್ ಮಾಡಿ ಡಾ.ರೇವಂತ್ ಕೊಲೆ ಮಾಡಿದ್ದ. ಅಲ್ಲದೇ ದರೋಡೆ ಮಾಡಿ ಪತ್ನಿಯನ್ನು ಕೊಲೆಗೈಯ್ಯಲಾಗಿದೆ ಎಂದು ಬಿಂಬಿಸಿದ್ದ. ಪ್ರಕರಣದ ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಪತಿ ರೇವಂತ್ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಭೀತಿಗೆ ಸಿಲುಕಿದ್ದ ಡಾ.ರೇವಂತ್ ನಿನ್ನೆ ಸಂಜೆ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ರೇವಂತ್ ಹರ್ಷಿತಾಳಿಗೆ ಕರೆ ಮಾಡಿ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದ. ಇನ್ನು ಕಳೆದ ಸಂಜೆ ಹರ್ಷಿತಾ ಕೂಡ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇದಕ್ಕೂ ಮುನ್ನ ಪತಿಯ ಸುಧೀಂದ್ರ ವಿರುದ್ಧ ಡೆತ್ ನೋಟ್ ಬರೆದಿಟ್ಟಿದ್ದಳು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ…