Thursday, January 23, 2025
ರಾಜಕೀಯ

Breaking News : ಬಿಜೆಪಿ ಆಂತರಿಕ ಕಲಹ ; ಕುಂಟಾರು ರವೀಶ ತಂತ್ರಿಗಳಿಂದ ಬಿಜೆಪಿಯ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನಿರ್ಧಾರ – ಮತ್ತೆ ಧಾರ್ಮಿಕ ಕ್ಷೇತ್ರದತ್ತ ಮುಖಮಾಡಿದ ತಂತ್ರಿಗಳು – ಕಹಳೆ ನ್ಯೂಸ್

ಕಾಸರಗೋಡು : ಬಿಜೆಪಿಯ ಕೇರಳದ ಪ್ರಶ್ನಾತೀತ ನಾಯಕ, ಗ್ರಾಮ ಗ್ರಾಮಗಳಲ್ಲಿ ಸಂಘಟನೆಯನ್ನು ಕಟ್ಟಿಬೆಳೆಸಿದ ನಾಯಕ, ಧಾರ್ಮಿಕ ಕ್ಷೇತ್ರದ ಬಹುದೊಡ್ಡ ಶಕ್ತಿ, ಸಾಮಾಜಿಕ ಕ್ಷೇತ್ರದ ಮುಂದಾಳು ರವೀಶ ತಂತ್ರಗಳು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಅನೇಕ‌ ಚುನಾವಣೆಗಳನ್ನು ಎದುರಿಸಿದ್ದರು, ಆದರೆ, ಅಂತರಿಕ ಕಲಹದಿಂದ ಕೆಲ ಚುನಾವಣೆಯಲ್ಲಿ ಅವರನ್ನು ಸೋಲಿಸಲಾಗಿದೆ ಎಂಬ ಮಾತು ಅವರ ಬೆಂಬಲಿಗರಿಂದ ಕೇಳಿ ಬರುತ್ತಿತ್ತು.

ಮೋದಿ, ಅಮಿತ್ ಶಾ ಸೇರಿದಂತೆ ಪಕ್ಷದ ವರಿಷ್ಟರಿಗೆ ತಂತ್ರಿಗಳ ಮೇಲೆ ಅದೇನೋ ವಿಶ್ವಾಸ, ಸಂಘದ ಪ್ರಮುಖರಿಗೆ ಒಬ್ಬ ಸ್ವಚ್ಛ ರಾಜಕಾರಣಿ ಎಂಬ ಒಲವು ಹೀಗೆ ಈ ಬಾರಿಯ ಬೈ ಇಲೆಕ್ಷನ್ ನಲ್ಲೂ ತಂತ್ರಿಗಳಿಗೆ ಟಿಕೇಟ್ ನೀಡಿತ್ತು ಬಿಜೆಪಿ. ಅದರೆ, ಸ್ಥಳೀಯ ರಾಜಕೀಯ ಕಿತ್ತಾಟದಿಂದ ಮುಗ್ಧ ತಂತ್ರಿಗಳನ್ನು ಸೋಲಿಸಲಾಗಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿಯಲ್ಲಿ ಮತ್ತಷ್ಟು ತಂತ್ರಿಗಳನ್ನು ತುಳಿಯಲಾಗುತ್ತಿತ್ತು ಎನ್ನುವ ಸಂಗತಿ ಕಾಸರಗೋಡಿನ ಎಲ್ಲರಿಗೂ ತಿಳಿದ ವಿಷಯ, ಆದರೆ, ಪ್ರಸ್ತುತ ಇದನ್ನೆಲ್ಲ ಅರಿತ ತಂತ್ರಿಗಳು ರಾಜಕೀಯ ಜೀವನವನ್ನು ಕೊನೆಗಾಣಿಸುವ ನಿರ್ಧಾರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿಯ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿ, ತಮ್ಮ ನೆಚ್ಚಿನ ಧಾರ್ಮಿಕ ಕ್ಷೇತ್ರದತ್ತ ಮುಖಮಾಡಿ ನಿಲ್ಲುವ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ತಂತ್ರಿಗಳ ಆಪ್ತವಲಯದಿಂದ ಕೇಳಿಬಂದಿದ್ದು, ನಾಳೆ ನಾಳಿದ್ದು, ತಂತ್ರಿಗಳು ಪಕ್ಷದ ಹಿರಿಯರಿಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.