ಪುತ್ತೂರು: ಪೆರ್ಲಂಪಾಡಿ ಕಡೆ ಹೋಗುತ್ತಿದ್ದ ಮಾರುತಿ ಓಮ್ನಿ ಮತ್ತು ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಫೆ.23 ರಂದು ಮಧ್ಯಾಹ್ನ ನಡೆದಿದ್ದು ಗಂಭೀರ ಗಾಯಗೊಂಡ ಕೊಡಿಪ್ಪಾಡಿ ನಿವಾಸಿ ನಾರಾಯಣ ಜೋಯಿಸ ಅವರು ಮೃತಪಟ್ಟಿದ್ದಾರೆ.
ನಾರಾಯಣ ಜೋಯಿಷ ಅವರು ಪೆರ್ಲಂಪಾಡಿ ತರವಾಡು ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಮಾರುತಿ ವ್ಯಾನ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮಾರುತಿ ಓಮ್ನಿಯ ಹಿಂದುಗಡೆ ನಾರಾಯಣ ಜೋಯಿಸ ಅವರ ಪುತ್ರ ಸಂಬಂಧಿಕರು ಇಕೊ ಕಾರ್ ನಲ್ಲಿ ಬರುತ್ತಿದ್ದು ಅಪಘಾತವನ್ನು ನೋಡಿ ತಕ್ಷಣ ಗಾಯಾಳು ನಾರಾಯಣ ಜೋಯಿಸ ಅವರನ್ನು ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.