ಹಿಂದೂ ಯುವತಿಯರೊಂದಿಗೆ ಅನ್ಯಧರ್ಮದ ಯುವಕರು ಬಿರುಮಲೆ ಗುಡ್ಡೆಯಲ್ಲಿ ಚೆಲ್ಲಾಟ ಪ್ರಕರಣ ; ದಕ್ಷ ಪೋಲೀಸ್ ಅಧಿಕಾರಿ ತಿಮ್ಮಪ್ಪ ನಾಯ್ಕ್ ರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ‘ ಹೈಡ್ರಾಮಕ್ಕೆ ತೆರೆ ‘ – ಕಹಳೆ ನ್ಯೂಸ್
ಪುತ್ತೂರು : ಮೈಸೂರು ಮೂಲದ ಹಿಂದೂ ಯುವತಿಯರನ್ನು ಅನ್ಯಧರ್ಮದ ಯುವಕರು ಪುತ್ತೂರಿನ ಬಿರುಮಲೆ ಗುಡ್ಡೆಗೆ ಕರೆದುಕೊಂಡು ಬಂದ ಚೆಲ್ಲಾಟಚಾಡುತ್ತಿದ್ದರು ಎನ್ನಲಾಗುತ್ತಿದೆ. ಇದನ್ನು ಅರಿತ ಬಜರಂಗದಳದ ಪುತ್ತೂರಿನ ಕಾರ್ಯಕರ್ತರು ದಾಳಿ ನಡೆಸಿದಾಗ ಮೋಜು ಮಸ್ತಿಯಲ್ಲಿ ತೊಡಗಿದ್ದ ತಂಡ ಪತ್ತೆಯಾಗಿದ್ದು, ಅವರನ್ನು ಪುತ್ತೂರು ನಗರ ಪೋಲೀಸರು ವಶಕ್ಕೆ ಪಡೆದು ತನಿಖೆ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಪ್ರಕರಣವನ್ನು ಸುಖಾಂತ್ಯಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತಂಡವರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪೋಲೀಸರ ಕಾರ್ಯದಕ್ಷತೆಯಿಂದ ಪ್ರಕರಣ ಸುಖಾಂತ್ಯಗೊಂಡಿದೆ.
ಯುವಕ – ಯುವತಿಯರು ಸಹಪಾಠಿಗಳಾಗಿದ್ದು, ಸೂಕ್ಷ್ಮತೆಯ ಮತ್ತು ಕೋಮು ಭಾವನೆಗಳ ಅರಿವಿಲ್ಲದೆ ವಿಹಾರಕ್ಕೆಂದು ಬಂದಿರುವಾದಗಿ, ಮತ್ತು ತಮ್ಮಿಂದಾದ ಅಚಾತುರ್ಯಕ್ಕೆ ಕ್ಷಮೆಯಾಚಿಸಿದ್ದಾರೆ. ನಂತರ ಯುವಕ – ಯುವತಿಯರ ಮನೆಯವರಿಗೂ ವಿಷಯ ಮುಟ್ಟಿಸಿದ್ದು, ಯುವತಿಯರನ್ನು ಮೈಸೂರಿಗೆ ಕಳುಹಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಾವು ದಾಳಿ ನಡೆಸಿದಾಗ 9 ಜನ ಮೈಸೂರು ಮೂಲದ ಹಿಂದೂ ಯುವತಿಯರೊಂದಿಗೆ 3 ಜನ ಮುಸ್ಲಿಂ ಯುವಕರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ತಕ್ಷಣವೇ ನಾವು ಪೋಲೀಸರಿಗೆ ಮಾಹಿತಿ ನೀಡಿದವು, ಪೋಲೀಸರು ವಶಕ್ಕೆ ಪಡೆದು ಕಾರ್ಯಚರಣೆ ನಡೆಸುತ್ತಿದ್ದಾರೆ.
– ಹರೀಶ್ ಕುಮಾರ್ ದೋಲ್ಪಾಡಿ, ಸಂಚಾಲಕ, ಪುತ್ತೂರು ಬಜರಂಗದಳ