ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಮಂತ್ರದೇವತೆ, ಗುಳಿಗ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಕೋಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ-ಕಹಳೆ ನ್ಯೂಸ್
ಫೆ,26 ಬುಧವಾರದಿಂದ ಮಾ.1 ಭಾನುವಾರದವೆಗೆ ನಡೆಯಲಿರುವ ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ ಕಟ್ಟೆಮಾರ್ ಶ್ರೀ ಮಂತ್ರದೇವತಾ ಶಿಲಾಮೂರ್ತಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಶ್ರೀ ಮಂತ್ರದೇವತೆ, ಗುಳಿಗ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಕೋಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ.
ಫೆ.26 ಬುಧವಾರ:ಸಂಜೆ 6ಕ್ಕೆ ಕಲ್ಲಡ್ಕ ಶ್ರೀ ರಾಮ ಮಂದಿರದಿಂದ ಶ್ರೀ ಮಂತ್ರದೇವತೆಯ ಶಿಲಾಮಯ ಮೂರ್ತಿಯ ಭವ್ಯ ಮೆರವಣಿಗೆ, ಉದ್ಘಾಟನೆಯನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾಡಲಿರುವರು.ಶ್ರೀ ಕ್ಷೇತ್ರ ನಿಟಿಲಾಪುರ ಪ್ರಧಾನ ಅರ್ಚಕ ನಾರಾಯಣ ಕಾರಂತ,ಕಲ್ಲಡ್ಕ ಇಟ್ಟಿಗೆ ಕಾರ್ಖಾನೆ ಮಾಲಕ ನಾರಾಯಣ ಸೋಮಯಾಜಿ,ಹೋಟೆಲ್ ಲಕ್ಷ್ಮೀ ಗಣೇಶ್ ಮಾಲಕ ರಾಜೇಂದ್ರ ಎನ್ ಹೊಳ್ಳ, ಈಶ್ವರ ಪೂಜಾರಿ, ಶ್ರೀ ನಾಕ್ಕೈತಾಯ ದೇವಸ್ಥಾನ ಸಜಿಪ ಗಡಿ ಪ್ರಧಾನರು ಶಂಕರ ಯಾನೆ ಕೋಚು ಪೂಜಾರಿ, ಮಹಾಬಲ ಶೆಟ್ಟಿ ನಂದಗೋಕುಲ, ಬಿ.ಸಿ.ರೋಡ್ ವಕೀಲರು ಸತೀಶ್ ಭಟ್ ಶಿವಗಿರಿ,ಕೇಶವ ಸುವರ್ಣ, ಉಪಸ್ಥಿತರಿರುವರು. ರಾತ್ರಿ 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಫೆ.27 ಗುರುವಾರ:ಸಂಜೆ 6ಕ್ಕೆ ನಾಗದೇವರಿಗೆ ಪ್ರೀತೃರ್ಥ, ಅಶ್ಲೇಷ ಬಲಿ ತನು ತರ್ಪಣ ಸೇವೆ, ರಾತ್ರಿ ರಿಂದ ಆಲಯ ಪರಿಗ್ರಹ, ಪ್ರಾರ್ಥನೆ,ಪಂಚಗವ್ಯ ಶುದ್ದಿ, ಸ್ವಸ್ತಿ ಪುಣ್ಯಾಹ, ರಾಕ್ಷೋಷ್ನ ಹೋಮ, ಸುದರ್ಶನ ಹೋಮ, ವಾಸ್ತು ಪೂಜೆ, ವಾಸ್ತುಹೋಮ, ವಾಸ್ತುಹೋಮ, ವಾಸ್ತುಬಲಿ, ದಿಕ್ಬಲಿ, ತತ್ವಹೋಮ, ಬಿಂಬಾಧಿವಾಸ, ಕಲಾಶಾಧಿವಾಸ, ರಾತ್ರಿ 8ಕ್ಕೆ ಅನ್ನಸಮತರ್ಪಣೆ,
ಫೆ.28 ಶುಕ್ರವಾರ:ಪ್ರಾತಃಕಾಲ ಗಣಹೋಮ, ಪ್ರತಿಷ್ಠಾ ಪ್ರಧಾನ ಹೋಮ,ಬೆಳಿಗ್ಗೆ 8.04ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಂತ್ರದೇವತಾ ಪುನರ್ ಪ್ರತಿಷ್ಠೆ ಕಲಾಶಾಭಿಷೇಕ ಪರ್ವಾರಾಧನೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಭಜನೆ, ಶ್ರೀ ಮಹಾಮ್ಮಾಯಿ ಮಹಿಳಾ ಭಜನಾ ಮಂಡಳಿ, ಬೊಂಡಾಲ ಇವರಿಂದ, ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
ಫೆ.29 ಶನಿವಾರ:ಬೆಳಿಗ್ಗೆ 6ರಿಂದ ವಿಶೇಷ ಭಜನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ.5ಕ್ಕೆ ಸಾಂಕ್ಕ್ರತಿಕ ಕಾರ್ಯಕ್ರಮ.ಸಂಜೆ 6ಕ್ಕೆ ಸಭಾ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ದೀಪ ಪ್ರಜ್ವಲಿದ್ದಾರೆ.ಅಧ್ಯಕ್ಷತೆಯನ್ನು ಮುಂಜೋಳಿಮಾರುಗುತ್ತು ಮೋಹನ್‍ರಾಜ ಚೌಟ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಉಕ್ಮಯ ಪೂಜಾರಿ, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮುಂಬೈ ಉದ್ಯಮಿ ಸುಂದರ್‍ರಾಜ್ ಹೆಗ್ಡೆ, ವಿಜಯ ಬಂಗೇರ, ಪದ್ಮನಾಭ ಪೂಜಾರಿ, ವಿಶ್ವನಾಥ ಕೆ.ಪೂಜಾರಿ, ಸೀತರಾಮ ಮಂಗಳೂರು, ಸುರೇಶ್ ಸುವರ್ನ ಸಾಂತೂರು, ಬಿರುವೆರ್ ಕುಡ್ಲ ಸ್ಥಾಪಕಧ್ಯಕ್ಷ ಉದಯ ಪೂಜಾರಿ, ರಾಘವೆಂದ್ರ ಹೆಗ್ಡೆ, ಯಶವಂತ ಬಂಗೇರ ಕಾಪು, ಅಶೋಕ ಕರ್ಕೆರಾ ಬಂಟ್ವಾಳ, ಹರೀಶ್ ಶೆಟ್ಟಿ ಚೆಂಬೂರು, ಜಯ ಕರ್ನಾಟಕ ರಾಜ್ಯ ಕಾರ್ಯಧ್ಯಕ್ಷ ಸಂತೋಷ್ ಕುಮಾರ್, ದಯಾನಂದ ಶೆಟ್ಟಿ ಮಿತ್ತಿಮಾರು, ಕಿರಣ್ ಶೆಟ್ಟಿ, ಉಪಸ್ಥಿತರಿರುವರು. ರಾತ್ರಿ 7ರಿಂದ ಅನ್ನಸಂತರ್ಪಣೆ, ಯಕ್ಷ ಗಾನ ಹಾಸ್ಯ ವೈಭವ ನಡೆಯಲಿದೆ. ರಾತ್ರಿ 11ರಿಂದ ಶ್ರಿ ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ದೊಂದಿ ಬೆಳಕಿನಲ್ಲಿ ವೈಭವದ ಕೋಲೋತ್ವ ನಡೆಯಲಿದೆ,
ಮಾ.1 ಭಾನುವಾರ:ಸಂಜೆ 6ಕ್ಕೆ ದೈವಗಳ ಅಗೇಲು ಸೇವೆ, 7ಕ್ಕೆ ಅನ್ನಸಂತರ್ಪಣೆ, 8ಕ್ಕೆ ಶ್ರಿ ಕೊರಗಜ್ಜ ದೈವದ ನರ್ತನ ಸೇವೆ ನಡೆಯಲಿದೆ.