ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಚೇತನ್ ಪ್ರಕಾಶ್ ನೇತೃತ್ವದಲ್ಲಿ ರೋಟರಿ ಯುವ ಸಹಯೋಗದೊಂದಿಗೆ ಕ್ಯಾನ್ಸರ್ ಸಂಬಂಧಿತ ರಕ್ತ ತಪಾಸಣೆ – ಕಹಳೆ ನ್ಯೂಸ್
ಪುತ್ತೂರು : ವಿಶ್ವಕ್ಯಾನ್ಸರ್ ದಿನಾಚರಣೆ ಪ್ರಯುಕ್ತರೋಟರಿ ಯುವ ಪುತ್ತೂರು ಇದರ ಸಹಯೋಗದೊಂದಿಗೆ ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಕ್ಯಾನ್ಸರ್ ಸಂಬಂಧಿತ ರಕ್ತ ತಪಾಸಣೆಗಳು ವಿಶೇಷ ರೀಯಾಯಿತಿಯೊಂದಿಗೆ ಫೆ. 24ರಂದು ನಡೆಯಿತು.
ಬೆಳಗ್ಗೆ ಗಂಟೆ 9ರಿಂದ ಸಂಜೆ ಗಂಟೆ 6ರ ತನಕ ಕ್ಯಾನ್ಸರ್ ಸಂಬಂಧಿ ರಕ್ತ ತಪಾಸಣೆಗಳಾದ ಎಎಫ್‌ಪಿ-(ಆಲ್ಫಾ ಫೀಟೋ ಪ್ರೋಟೀನ್)ಯಕೃತ್, ವೃಷಣ ಹಾಗೂ ಅಂಡಾಶಯಗಳ ಕ್ಯಾನ್ಸರ್‌ತಪಾಸಣೆ, ಸಿಎ-125-ಅಂಡಾಶಯ, ಸ್ತನ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್ ತಪಾಸಣೆ, ಸಿಎ.19.9-ಮೇದೋಜ್ಜೀರಕ ಗ್ರಂಥಿ ಮತ್ತುದೊಡ್ಡ ಕರುಳಿನ ಕ್ಯಾನ್ಸರ್‌ತಪಾಸಣೆ, ಪಿಎಸ್‌ಎ-ಪುರುಷರಜನನೇಂದ್ರಿಯಕ್ಕೆ ಸಂಬಂಧಿಸಿದ ಒಂದು ಗ್ರಂಥಿಯಕ್ಯಾನ್ಸರ್ ತಪಾಸಣೆ, ಬೀಟಾ ಎಚ್‌ಜಿಫ್-ಜೀವಕೋಶದ ಕ್ಯಾನ್ಸರ್ (ಗರ್ಭಿಣಿಯರಲ್ಲದ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ) ಹಾಗೂ ಸಿಇಎಗಳಿಗೆ ಶೇ.2೦ ವಿಶೇಷ ರಿಯಾಯಿತಿಯಲ್ಲಿ ತಪಾಸಣೆ ನಡೆಯಿತು. ಲ್ಯಾಬೋರೇಟರಿಯ ಮಾಲಕ ಚೇತನ್‌ಪ್ರಕಾಶ್ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.