Wednesday, January 22, 2025
ಸುದ್ದಿ

ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ “ಸ್ವರಕ್ಷಾ” ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಶೋಷಣೆ ಹೆಚ್ಚುತ್ತಿದೆ.

ಈ ಹಿನ್ನಲೆಯಲ್ಲೇ ಹೆಣ್ಣು ಮಕ್ಕಳು ಬೇರೆಯವರಿಗೆ ಆಧಾರವಾಗದೆ ಯಾವರೀತಿಯಾಗಿ ಕಷ್ಟ ಕಾಲಗಳನ್ನು ಎದುರಿಸಬಹುದು ಎಂಬುದರ ಬಗೆಗೆ ಇನ್ನರ್ ವೀಲ್ ಕ್ಲಬ್ ಓಫ್ ಪುತ್ತೂರು ಇದರ ವತಿಯಿಂದ “ಸೆಲ್ಫ್ ಡಿಫೆನ್ಸ್” ಎಂಬ ಕಾರ್ಯಾಗಾರವು ಇಂದು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ನಡೆಯಿತು. ಈ ಹಿಂದೆ ಒಂದೂ ವರೆ ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸೆಲ್ಫ್ ಡಿಫೆನ್ಸ್ ಬಗೆಗೆ ಮಾಹಿತಿ ನೀಡಿರುವ ಕಾರ್ತಿಕ್ ಕಟೀಲ್ ಇವರು ಫಿಲೋಮಿನಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ವೇದಿಕೆಯಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಸಹನಾ ಭವಿನ್, ಕಾರ್ಯದರ್ಶಿ ವಿಜಯಲಕ್ಷ್ಮಿ ಶೆಣೈ, ಫಿಲೋಮಿನಾ ಕಾಲೇಜಿನ ಓಸ್ವಾಲ್ಡ್ ರೊಡ್ರಿಗಸ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.