Wednesday, January 22, 2025
ಸುದ್ದಿ

ಮುಂಡೂರಿನ ಮಹಮ್ಮದ್ ಇಲ್ಯಾಸ್ ಎಂಬಾತನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ- ಕಹಳೆ ನ್ಯೂಸ್

ಪುತ್ತೂರು: ಸರಣಿ ಅತ್ಯಾಚಾರ ಯತ್ನಗಳನ್ನು ಕೇಳಿ ಬೇಸತ್ತಿರುವ ಜನರಿಗೆ ಮತ್ತೊಂದು ಅಂತಹ ಸುದ್ದಿ ಶಾಕ್ ನೀಡುವಂತಿದೆ. ಪುತ್ತೂರು ತಾಲೂಕು ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯೋರ್ವರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಆರೋಪಿ ಮಹಮ್ಮದ್ ಇಲ್ಯಾಸ್‍ನನ್ನು ಸಂಪ್ಯ ಪೋಲಿಸರು ಇಂದು ಫೆಬ್ರವರಿ 26ರಂದು ಬಂಧಿಸಿದ್ದಾರೆ.
ಮೂಲತಃ ಪುತ್ತೂರಿನ ಮುಂಡೂರು ನಿವಾಸಿಯಾದ ಮಹಮ್ಮದ್ ಇಲ್ಯಾಸ್ ವೃತ್ತಿಯಲ್ಲಿ ಶಾಮಿಯಾನ ಮತ್ತು ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದಾನೆ.ಮಹಮ್ಮದ್ ಇಲ್ಯಾಸ್ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂಪ್ಯ ಪೋಲಿಸರು ಠಾಣೆಗೆ ದೂರು ಬಂದಿತ್ತು.
ಬಂದ ದೂರಿನ ಮೇರೆಗೆ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆತನ ಮೇಲೆ ಮಕ್ಕಳ ಮೇಲಿನ ಹಲ್ಲೆ ಮತ್ತು ಅತ್ಯಾಚಾರ ತಡೆ ಕಾನೂನು-ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ

ಜಾಹೀರಾತು

ಜಾಹೀರಾತು
ಜಾಹೀರಾತು