Wednesday, January 22, 2025
ಸುದ್ದಿ

ಉಡುಪಿಯಲ್ಲಿ ಗಾಯಗೊಂಡ ವ್ಯಕ್ತಿಯ ರಕ್ಷಣೆ-ಕಹಳೆ ನ್ಯೂಸ್

ಉಡುಪಿ: ಮಲ್ಪೆಯ ಬಂದರಿನಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿಯವರು ಸಾರ್ವಜನಿಕರ ಸಹಾಯದಿಂದ ಆಂಬುಲೆನ್ಸ್‍ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ನಿನ್ನೆ ರಾತ್ರಿ ವ್ಯಕ್ತಿಯು ಬಿದ್ದಿದ್ದು ಮುಖಕ್ಕೆ ತೀವ್ರ ಗಾಯಗಳಾಗಿವೆ. ಈ ವ್ಯಕ್ತಿ ಯಾರ ಗಮನಕ್ಕೂ ಬಾರದೆ ಇದ್ದ ಕಾರಣ ಬೆಳಗಿನ ಜಾವ ವಿಶು ಶೆಟ್ಟಿಯವರಿಗೆ ಮಾಹಿತಿ ಬಂದಿತ್ತು. ಇವರು ರಾಮ್ ಎಂಬ ಹೆಸರಿನ ವ್ಯಕ್ತಿಯಾಗಿದ್ದು, ತಂದೆ ಸೋಮ ನಾಯ್ಕ್. ಕುಮಾರನ ಹಳ್ಳಿ ಬಳ್ಳಾರಿ ಎಂಬ ಚಹರೆ ತಿಳಿದು ಬಂದಿದೆ. ಈ ಕುರಿತು ಸಂಬಂಧಿಕರು ಅಥವಾ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆಗೆ ಸಂಪರ್ಕಿಸಬೇಕೆಂದು ವಿಶು ಶೆಟ್ಟಿ ವಿನಂತಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು