Sunday, January 19, 2025
ಸುದ್ದಿ

ಮಾರ್ಚ್ 1 ರಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ರಿ. ಮಂಗಳೂರು ಇದರ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭ | ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಉಪ್ಪಿನಂಗಡಿ ದೇವಸ್ಥಾನದ ವಠಾರದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಮತ್ತು ವ್ಸವಸ್ಥಾಪಕ ವೆಂಕಟೇಶ ಎಂ ಬಿಡುಗಡೆಯ ಮಾಡಿದವರು.

ಮಾರ್ಚ್ ೧ ರಂದು ಯಕ್ಷಧ್ರುವ ಉಪ್ಪಿನಂಗಡಿ ಘಟಕ ಉದ್ಘಾಟನೆಗೊಳ್ಳಲಿದೆ. ಸಂಜೆ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶಟ್ಟಿ, ಶಾಸಕಿ ಶಕುಂತಲಾ ಶೆಟ್ಟಿ ,ಅಶೋಕ್ ಕುಮಾರ್ ರೈ ಇವರುಗಳು ಉಪಸ್ಥಿತಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ವೆಂಕಟರಮಣ ಭಟ್ ಪಾತಾಳ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಯಕ್ಷ ಗಾನ ಹಾಸ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಕೆ. ಜಗದೀಶ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಯನ್. ಗೋಪಾಲ ಹೆಗ್ಡೆ, ಕಾರ್ಯದರ್ಶಿ ಶ್ರೀ ರವೀಶ ಎಚ್.ಟಿ, ಕೋಶಾಧಿಕಾರಿ ಶ್ರೀ ಕಂಗ್ವೆ ವಿಶ್ವನಾಥ ಶೆಟ್ಟಿ, ಸದಸ್ಯರಾದ ಶ್ರೀ ಜಯಂತ ಪೋರೋಳಿ, ಶ್ರೀ ಕೆ ಸುಧಾಕರ ಶೆಟ್ಟಿ, ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ಹರಿಕಿರಣ್ ಕೊೈಲ, ಶ್ರೀ ಯು.ಎಲ್ ಉದಯಕುಮಾರ್ ಶ್ರೀ ಗಂಗಾಧರ ಟೈಲರ್, ಶ್ರೀ ರಾಧಾಕೃಷ್ಣ ಬೊಳ್ಳಾವು, ಶ್ರೀ ಶಿವಕುಮಾರ ಬಾರಿತ್ತಾಯ, ಶ್ರೀವಿನೀತ್ ಶಗ್ರಿತ್ತಾಯ, ಶ್ರೀ ಗಣೇಶ್ ಆಚಾರ್ಯ, ಶ್ರೀ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಶ್ರೀ ಶಶಿಧರ ನೆಕ್ಕಿಲಾಡಿ, ಶ್ರೀಮತಿ ಮನೋಜ್ ಶೆಟ್ಟಿ, ಶ್ರೀ ಪ್ರವೀಣ ಆಳ್ವ ಕುಂತೂರು, ಶ್ರೀ ಉಮೇಶ ಬುಡಲೂರು, ಶ್ರೀ ರಾಜೇಶ ಆಚಾರ್ಯ, ಶ್ರೀ ಶರತ್ ಕೋಟೆ, ಶ್ರೀಕೃಷ್ಣ ಪ್ರಸಾದ್, ಶ್ರೀ ದಿವಾಕರ ಉಪಸ್ಥಿತರಿದ್ದರು.

ವರದಿ : ಕಹಳೆ ನ್ಯೂಸ್