ಗೃಹ ರಕ್ಷಕ ದಳದ ದ.ಕಜಿಲ್ಲಾ ಕಮಾಂಡೆಂಟ್ ಆಗಿ ಪುನರಾಯ್ಕೆಗೊಂಡ ಡಾ. ಮುರಳೀ ಮೋಹನ್ ಚೂಂತಾರುರವರಿಗೆ ಅಭಿನಂದನೆ – ಕಹಳೆ ನ್ಯೂಸ್
ಉಪ್ಪಿನಂಗಡಿ : ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದ ಪಾತ್ರ ಮಹತ್ತರವಾಗಿದೆ. ಗೃಹರಕ್ಷಕರು ಸಮಯ ಪಾಲನೆ ಮತ್ತು ಕರ್ತವ್ಯದಕ್ಷತೆಯನ್ನು ಪಾಲಿಸಿ ಇಲಾಖೆಯ ಘನತೆಯನ್ನು ಹೆಚ್ಚಿಸಬೇಕೆಂದು ಉಪ್ಪಿನಂಗಡಿ ಠಾಣಾಧಿಕಾರಿ ಈರಯ್ಯ ರವರು ಕರೆ ನೀಡಿದರು.
ಅವರು ಮಾ.8ರಂದು ಗೃಹ ರಕ್ಷಕದಳದ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ನಡೆದ ಗೃಹ ರಕ್ಷಕ ದಳದ ದ.ಕಜಿಲ್ಲಾ ಕಮಾಂಡೆಂಟ್ ಆಗಿ ಎರಡನೇ ಅವಧಿಗೆ ಪುನರಾಯ್ಕೆಗೊಂಡ ಡಾ. ಮುರಳೀ ಮೋಹನ್ ಚೂಂತಾರು ರವರಿಗೆ ಅಭಿನಂದನೆ ಹಾಗೂ ಗೃಹ ರಕ್ಷಕ ದಳದ ಕುಂದುಕೊರತೆಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಭಿನಂದನೆ ಸ್ವೀಕರಿಸಿದ ದ.ಕಜಿಲ್ಲಾ ಕಮಾಂಡೆಂಟ್ ಡಾ. ಮುರಳೀ ಮೋಹನ್ ಚೂಂತಾರು, ದ.ಕ ಜಿಲ್ಲೆಯಲ್ಲೇ ಉಪ್ಪಿನಂಗಡಿಯ ಗೃಹ ರಕ್ಷಕ ಘಟಕ ಉತ್ತಮ ಹೆಸರನ್ನು ಪಡೆದಿದೆ. ಈ ಹೆಗ್ಗಳೀಕೆಯನ್ನು ಉಳಿಸಿಕೊಂಡೇ ಇನ್ನಷ್ಟು ಸಾಧನೆ ತೋರಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದೇವಕಿ, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಶುಭ ಹಾರೈಸಿದರು.
ಕಾರ್ಯಕ್ರಮದ ಮುನ್ನ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ ಡಾ. ಮುರಳೀ ಮೋಹನ್ ಚೂಂತಾರು ರವರಿಗೆ ಗೌರವ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ, ಕಡಬ ಘಟಕದ ಪ್ಲಟೂನ್ ಸಾರ್ಜೆಂಟ್ ತೀರ್ಥೇಶ್, ಪುತ್ತೂರು ಘಟಕದ ಪ್ಲಟೂನ್ ಸಾರ್ಜೆಂಟ್ ಸುದರ್ಶನ್, ಮಂಗಳೂರು ಘಟಕದ ರಮೆಶ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿನೇಶ್ ಬಿ ಸ್ವಾಗತಿಸಿ ,ಗೃಹ ರಕ್ಷಕಿ ನಳಿನಿ ಪಿ ವಂದಿಸಿದರು.