Recent Posts

Tuesday, November 26, 2024
ಸುದ್ದಿ

Breaking News : ಪುತ್ತೂರಿನ ಉಪನ್ಯಾಸಕಿಯದ್ದೇ ಎಂದು ಯಾರದೋ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಕಿಡಿಗೇಡಿಗಳು ; ಉಪನ್ಯಾಸಕಿಯಿಂದ ಸೈಬರ್ ಕ್ರೈಮ್ ಗೆ ದೂರು – ಕಹಳೆ ನ್ಯೂಸ್

ಪುತ್ತೂರು: ಯಾರದೋ ಅಶ್ಲೀಲ ವೀಡಿಯೋದ ಜೊತೆಗೆ ತನ್ನ ಫೋಟೋವನ್ನು ಹಂಚಿ ,ಆ ವಿಡಿಯೋ ತನ್ನದೇ ಎಂದು ಬಿಂಬಿಸಿ ,ಆ ಮೂಲಕ ಮಾನ ಹರಾಜು ಮಾಡುವ ಕೃತ್ಯದಲ್ಲಿ ಕೆಲವರು ತೊಡಗಿದ್ದಾರೆ ಎಂದು ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕಿ ಮಂಗಳೂರಿನ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

ಉಪನ್ಯಾಸಕಿಯ ಇನ್‌ಸ್ಟಾ ಗ್ರಾಂ ಖಾತೆಗೆ Whatsapp ಗ್ರೂಪ್ ಒಂದರ ಸ್ಕ್ರೀನ್ ಶಾಟ್ ನ್ನು ಬೇರೊಂದು ಅಪರಿಚಿತ ಇನ್‌ಸ್ಟಾ ಗ್ರಾಂ ಖಾತೆಯಿಂದ ರವಾನಿಸಲಾಗಿತ್ತು . ಆ ಸ್ಕ್ರೀನ್ ಶಾಟ್ ನಲ್ಲಿ ಅಶ್ಲೀಲ ವಿಡಿಯೋ ಹಾಗೂ ಉಪನ್ಯಾಸಕಿಯ ಭಾವ ಚಿತ್ರ ಇತ್ತು . ಆ ಸ್ಕ್ರೀನ್ ಶಾಟ್ ಜೊತೆಗೆ ಇದು ಈ ಭಾವಚಿತ್ರ ಹಾಗೂ ಅಶ್ಲೀಲ ವೀಡಿಯೋ ವಾಟ್ಸಪ್ ಗ್ರೂಪ್‌ನಲ್ಲಿ ಹರಿದಾಡುತ್ತಿದೆ, ಇದು ನಿಮ್ಮದೇ ಎಂದು ಪರಿಶೀಲಿಸಿ ಎಂದು ಮೆಸೇಜ್ ಕಳುಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಕ್ರೀನ್ ಶಾಟ್ ನಲ್ಲಿ ಇದ್ದ ಅಶ್ಲೀಲ ವಿಡಿಯೋ ಪ್ಲೇ ಆಗದ ಕಾರಣ ಹಾಗೂ ಚಿತ್ರ ಮಸುಕು ಮಸುಕು ಆಗಿ ಇದ್ದ ಕಾರಣ ಉಪನ್ಯಾಸಕಿ ಪೂರ್ತಿ ವಿಡಿಯೋ ವನ್ನು ತನಗೆ ಕಳುಹಿಸುವಂತೆ ಆ ಅಪರಿಚಿತ ಇನ್‌ಸ್ಟಾ ಗ್ರಾಂ ಖಾತೆದಾರನಲ್ಲಿ ಮನವಿ ಮಾಡಿ Whatsapp ನಂಬರ್ ನೀಡಿದ ಮೇರೆಗೆ ಅವರು ವಿಡಿಯೋ ಕಳುಹಿಸಿ ಕೊಟ್ಟಿದ್ದರು .ಆ ವಿಡಿಯೋ ವನ್ನು ಪರಿಶೀಲಿಸಿದಾಗ ಆ ವಿಡಿಯೋದಲ್ಲಿ ಇರುವ ಯುವತಿ ಬೇರೆ ಯಾರೋ ಆಗಿದ್ದು , ಅದರ ಜೊತೆಗೆ ಉಪನ್ಯಾಸಕಿಯ ಭಾವ ಚಿತ್ರ ಬಳಸಿ ವಿನಾಕಾರಣ ಗೊಂದಲ ನಿರ್ಮಿಸಿ ತನ್ನ ಮಾನ ಹಾನಿಗೆ ಯತ್ನಿಸಿದ್ದಾರೆ ಎಂದು ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾವಚಿತ್ರ ಮತ್ತು ವೀಡಿಯೋ ಕಳುಹಿಸಿದ ವ್ಯಕ್ತಿಗೆ ಉಪನ್ಯಾಸಕಿಯೂ ಕರೆ ಮಾಡಿ ಅಶ್ಲೀಲ ವಿಡಿಯೋ ಹಂಚಲಾದ ವಾಟ್ಸಪ್ ಗ್ರೂಪ್‌ನ ಅಡ್ಮಿನ್ ಹಾಗೂ ಸದಸ್ಯರ ಬಗ್ಗೆ ವಿಚಾರಿಸಿದ್ದು ಆ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆ ವ್ಯಕ್ತಿ ಕಳುಹಿಸಿದ ಸ್ಕ್ರೀನ್‌ಶಾಟ್‌ನಲ್ಲಿ ಗ್ರೂಪಿನ ಹೆಸರಿನ ಕೆಳಗೆ ಕಾಣುವ ನಂಬರ್‌ಗೆ ಬ್ಲ್ಯಾಕ್ ಮಾರ್ಕ್ ಮಾಡಿ ಅಳಿಸಿರುತ್ತಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ಉಪನ್ಯಾಸಕಿ ನೀಡಿದ ದೂರಿನಂತೆ ಮಂಗಳೂರಿನ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರ ಉಪನ್ಯಾಸಕಿಯೇ ಅಶ್ಲೀಲ ವೀಡಿಯೋ ದಲ್ಲಿರುವ ಯುವತಿ ಎಂದು ಉಪನ್ಯಾಸಕಿಯ ಫೋಟೋ ಹಾಗೂ ಆ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರವಾನೆಯಾಗುತ್ತಿರುವ ಮಾಹಿತಿ ಸೈಬರ್ ಪೊಲೀಸ್ ಅಧಿಕಾರಿಗಳಿಗೆ ದೊರೆತಿದ್ದು ಅವರು ಈ ಬಗ್ಗೆ ಶೋಧ ಕಾರ್ಯ ಆರಂಭಿಸಿದ್ದು , ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಿದ್ದಾರೆ.