Breaking News : ಮುಸುಕು ಧಾರಿಗಳಿಂದ ಬಜರಂಗದಳದ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ ; ಆರೋಪಿ ಶಮೀರ್ ಮತ್ತು ಆಬೀದ್ ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್
ಪುತ್ತೂರು: ಬೈಕ್ನಲ್ಲಿ ಬಂದ ಮುಸುಕುಧಾರಿಗಳು ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್ಪಿ ಸ್ಕ್ವಾಡ್ ಮತ್ತು ಸಂಪ್ಯ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದು ಆರೋಪಿಗಳಾದ ಶಮೀರ್ ಮತ್ತು ಆಬೀದ್ ಈರ್ವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಶಾಂತಿಗೋಡು ಗ್ರಾಮದ ಗೋಳಿತ್ತಡಿ ನಿವಾಸಿ ವೆಂಕಪ್ಪ ಗೌಡ ಎಂಬವರ ಪುತ್ರ ಬಜರಂಗದಳದ ಪುತ್ತೂರು ನಗರ ಸಾಪ್ತಾಹಿಕ್ ಪ್ರಮುಖ್ ಆಗಿರುವ ರಂಜಿತ್ ಜಿ.ವಿ ಅವರು ಮಾ.4ರಂದು ತನ್ನ ಅಜ್ಜಿ ಮನೆ ಸವಣೂರಿನ ಕೆಡೆಂಜಿ ಕಡೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಎರಡು ಬೈಕ್ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ರಂಜಿತ್ ಅವರ ಬೈಕ್ನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಘಟನೆ ವೇಳೆ ಮುಸುಕುಧಾರಿಗಳ ಪೈಕಿ ಓರ್ವ ಆರೋಪಿಯನ್ನು ರಂಜಿತ್ರವರು ಗುರುತಿಸಿದ್ದರು. ಗಾಯಾಳು ರಂಜಿತ್ ಅವರಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದು,ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.