Recent Posts

Monday, April 14, 2025
ಸುದ್ದಿ

ಕೆನಡಾ ಪ್ರಧಾನಿ ಪತ್ನಿಗೂ ಕಾಣಿಸಿಕೊಂಡ ಕರೋನಾ-ಕಹಳೆ ನ್ಯೂಸ್

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಕರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಸೋಫಿಗೆ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಪರೀಕ್ಷೆ ವೇಳೆ ಕರೋನಾ ಇರುವುದು ದೃಢಪಟ್ಟಿದೆ. ಅವ್ರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮೂಲಗಳು ಹೇಳಿವೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಸೋಫಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರ್ತಿದೆ. ಆದ್ರೆ 14 ದಿನಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ. ಹಾಗೆ ಪ್ರಧಾನಿಯವರಿಗೂ ಎಚ್ಚರವಾಗಿರಲು ಸೂಚನೆ ನೀಡಲಾಗಿದೆ. ಅವ್ರು ಕೆಲಸ ಮುಂದುವರೆಸಲಿದ್ದಾರೆಂದು ಮೂಲಗಳು ಹೇಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವದ 115 ಕ್ಕೂ ಹೆಚ್ಚು ದೇಶಗಳು ಕರೋನಾ ವೈರಸ್ ಗೆ ತುತ್ತಾಗಿವೆ. 4,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1,25,293 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಚೀನಾದಲ್ಲಿ ಬುಧವಾರ ಸೋಂಕಿನಿಂದಾಗಿ 11 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 70ರ ಗಡಿ ದಾಟಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ