ಪುತ್ತೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪಘಾತ : ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ಮೊರೆ ಹೋದ ಪೊಲೀಸರು-ಕಹಳೆ ನ್ಯೂಸ್
ಪುತ್ತೂರು: ಇತ್ತೀಚೆಗೆ ಪುತ್ತೂರಿನಲ್ಲಿ ಅಪಘಾತ ಪ್ರಮಾಣ ಹೆಚ್ಚಾಗುತ್ತಿದ್ದು, ಹಲವು ಜನ ಮೃತ ಪಟ್ಟಿದ್ದಾರೆ. ಮಾಣಿ ಮೈಸೂರು ಹೆದ್ದಾರಿಯ ಪುತ್ತೂರಿನ ಮುಕ್ರುಂಪಾಡಿಯಲ್ಲಿ ಬ್ಯಾರಿಕೇಡಿಗೆ ಬೈಕ್ ಡಿಕ್ಕಿಯಾಗಿ ಸಂಜೀವ ಶೆಟ್ಟಿ ಎಂಬವರು ಮಾ.೧೨ ರಂದು ತೀವ್ರ ಗಾಯಗೊಂಡಿದ್ದು, ಇಂದು ಮೃತರಾಗಿದ್ದಾರೆ. ಪರ್ಪುಂಜದಲ್ಲೂ ನಿನ್ನೆ ಅಪಘಾತ ನಡೆದು ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದಾರೆ.
ಇಂದು ಪುತ್ತೂರಿನ ಮಹಾಲಿಂಗೇಶ್ವರ ದೇವರ ಸಂಬAಧ ಪಟ್ಟ ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ಕ್ಷೇತ್ರದಲ್ಲಿ ಪ್ರತಿ ಶುಕ್ರವಾರ ಪೂಜೆ ನಡೆಯುತ್ತಿದ್ದು, ಸಾವಿರಾರು ಜನ ಭಕ್ತಾಧಿಗಳು ಪ್ರಾರ್ಥನೆ ಮಾಡುತ್ತಾರೆ. ಆ ಕ್ಷೇತ್ರಕ್ಕೆ ಇದೀಗ ಪೊಲೀಸರು ಮೊರೆ ಹೋಗಿದ್ದಾರೆ.
ಪುತ್ತೂರು ಟ್ರಾಫಿಕ್ ಎಸ್.ಐ ಚೆಲುವಯ್ಯ ಹಾಗೂ ಸಿಬ್ಬಂದಿ ವರ್ಗ ಇಂದು ಮದ್ಯಾಹ್ನ ಅಮ್ಮನವರ ನೆಲೆಯಲ್ಲಿ ಪ್ರಾರ್ಥನೆ ಮಾಡಿ ಅಪಘಾತಗಳು ಕಡಿಮೆಯಾಗಲಿ, ಜನರಿಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಬುದ್ಧಿ ಕೊಡಲಿ, ಲೋಕಕ್ಕೆ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದರು.
ಇನ್ನೂ ಈ ವೇಳೆ ನೂರಾರು ಭಕ್ತಾಧಿಗಳು ಕ್ಷೇತ್ರದಲ್ಲಿ ಉಪಸ್ಥಿತರಿದ್ದರು.