ಕೊರೋನಾ ಎಫೆಕ್ಟ್ : ನಾಳೆಯಿಂದ ಕರ್ನಾಟಕ ಸ್ತಬ್ಧ ” ಬಾರ್, ಪಬ್, ಶಾಲಾ – ಕಾಲೇಜು – ಸಾರ್ವಜನಿಕ ಸಭೆ – ಸಮಾರಂಭ, ಜಾತ್ರೆ ಸಂಪೂರ್ಣ ಬಂದ್ – ಕಹಳೆ ನ್ಯೂಸ್
ಬೆಂಗಳೂರು : ಕೊರೋನಾ ಸೋಂಕಿನಿಂದಾಗಿ ಕಲುಬುರ್ಗಿಯ ವೃದ್ಧ ಸಾವಿಗೀಡಾಗಿರುವ ಹಿನ್ನಲೆಯಲ್ಲಿ ಮತ್ತು ಮಹಾಮಾರಿ ಕೊರೋನಾ ವೈರಾಣು ತೀವ್ರಗತಿಯಲ್ಲಿ ಹಬ್ಬುವಿಕೆಯನ್ನು ತಡೆಗಟ್ಟಲು ಮಾ.14ರಿಂದ ಏಳು ದಿನಗಳ ಕಾಲ ಯಾವುದೇ ಸಭೆ-ಸಮಾರಂಭಗಳನ್ನು ನಡೆಸದಿರಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಾ.13ರಂದು ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ್ದು, ಸಭೆಯ ಬಳಿಕ ಮಾಲ್, ಚಿತ್ರ ಮಂದಿರ, ಮದುವೆ, ಸಮ್ಮರ್, ನೈಟ್ ಕ್ಲಬ್, ಸ್ವಿಮ್ಮಿಂಗ್ ಫುಲ್, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ ಜಾತ್ರೆ ಎಲ್ಲ ಒಂದು ವಾರ ಕಾಲ ನಿಲ್ಲಿಸಲು ಸೂಚನೆ ನೀಡಲಾಗಿದೆ. ಮದುವೆ ಕಾರ್ಯಕ್ರಮಗಳನ್ನು 100ಕ್ಕಿಂತ ಅಧಿಕ ಮಂದಿ ಸೇರದಂತೆ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಮಾಡುವಂತೆಯೂ ಸೂಚಿಸಲಾಗಿದೆ.
ಎಲ್ಲಾ ವಿವಿಗಳು ಬಂದ್ ಆಗಲಿದ್ದು, ಎಸ್.ಎಸ್.ಎಲ್.ಸಿ. ಇನ್ನಿತರ ಪರೀಕ್ಷೆಗಳು ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ನಡೆಯಲಿದೆ. ಎಲ್ಲಾ ಅಂತರಾಷ್ಟ್ರೀಯ ವೀಸಾಗಳನ್ನು ಏ.15ರ ವರೆಗೆ ತಡೆಹಿಡಿಯಲಾಗಿದೆ. ಐಟಿಬಿಟಿಯವರಿಗೆ ಒಂದು ವಾರಗಳ ಕಾಲ ಮನೆಯಲ್ಲೇ ವರ್ಕ್ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯಲಿದೆ. ಸಾಧ್ಯವಾದಷ್ಟು ಪ್ರವಾಸ ಮಾಡುವುದನ್ನು ರದ್ದು ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.