ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆ, ಪುತ್ತೂರು ನಗರ ಠಾಣೆ ಹಾಗೂ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಸ್ಥಳಗಳಲ್ಲಿ ಕಳ್ಳತನ ಮಾಡುತ್ತಿದ್ದ ಶೌಕತ್ ಅಲಿ (೫೯ ವರ್ಷ)ನನ್ನು, ಮಾನ್ಯ ದ.ಕ ಜಿಲ್ಲಾ ಪೊಲೀಸ್ ಆಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷರವರ ಆದೇಶ ಹಾಗೂ ಮಾನ್ಯ ಪೊಲೀಸ್ ಉಪಾಧೀಕ್ಷಕರು , ಪುತ್ತೂರು ಉಪ-ವಿಭಾಗರವರ ನಿರ್ದೇಶನದಂತೆ ನಾಗೇಶ್ ಕದ್ರಿ ಪುತ್ತೂರು ಗ್ರಾಮಾಂತರ ವೃತ್ತರವರ ನೇತ್ರತ್ವದಲ್ಲಿ ದಸ್ತಗಿರಿ ಮಾಡಲಾಗಿದೆ.
ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದನು ಈತನಿಂದ ೧೩ ಪ್ರಕರಣಗಳನ್ನು ಪತ್ತೆ ಹಚ್ಚಿ , ಸುಮಾರು ೧೮ ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಲಾಗಿದೆ.
ಸದ್ರಿ ಪ್ರಕರಣದ ಪತ್ತೆಯ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಪಿ.ಎಸ್. ಐ ಈರಯ್ಯ ಡಿ.ಎನ್, ಪಿ.ಎಸ್.ಐ ಭರತ್, ಎ.ಎಸ್.ಐ ಚೋಮ , ಹೆಚ್.ಸಿಗಳಾದ ದೇವದಾಸ್, ಶೇಖರ್, ಇμರ್Áದ್ ಪಡಂಗಡಿ , ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಹೆಚ್.ಸಿ , ಅದ್ರಾಮ ಪುಣಚ , ದರ್ಣಪ್ಪ ಪಿಸಿ ವಿನಯಕುಮಾರ್ ಯೇನೆಕಲ್ , ಮತ್ತು ಪುತ್ತೂರು ಗ್ರಾಮಾಂತರ ಪೃತ್ತ ಕಛೇರಿಯ ಹೆಚ್.ಸಿ ಅಬ್ದುಲ್ ಸಲೀಂ , ಶಿವರಾಮ , ಪಿಸಿ ಜಗದೀಶ್ ಇಲಾಖಾ ವಾಹನ ಚಾಲಕರಾದ ಬಂದೆನವಾಜ್ ಬುಡ್ಕಿರವರು ಈ ಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ.