Wednesday, November 27, 2024
ಸುದ್ದಿ

ಕೊರೊನಾ ಲಕ್ಷಣ ಹೇಗಿರುತ್ತದೆ ಎಂದು ತಿಳಿಸಿದ ಕರೋನಾ ಸೋಂಕಿತ ವೈದ್ಯರು – ಕಹಳೆ ನ್ಯೂಸ್

ಕೊರೊನಾ ವೈರಸ್ ಸೋಂಕಿನ ಬಗ್ಗೆ ಅನೇಕರು ಆತಂಕದಲ್ಲಿದ್ದಾರೆ. ಇದೇ ಸಮಯಕ್ಕೆ ರೋಗ ಲಕ್ಷಣಗಳು ಹೇಗಿರುತ್ತದೆ ಎಂದು ಕರೋನಾ ವೈರಸ್ ಸೋಂಕಿತ ವೈದ್ಯರೊಬ್ಬರು ಜನರಿಗೆ ಮಾಹಿತಿ ನೀಡುತ್ತಿದ್ದಾರೆ.


ಮೊದಲ ದಿನ ತಲೆನೋವು, ಗಂಟಲು ನೋವು ಕಾಡಿತ್ತು. ನಾಲ್ಕನೇ ದಿನ ವಿಪರೀತ ಕೆಮ್ಮು ಹಾಗೂ ಶ್ವಾಸಕೋಶದಲ್ಲಿ ದ್ರವ ಅಂಶವಿತ್ತು. ಐದನೇ ದಿನ ಆಯಾಸವಿದೆ. ಆದ್ರೆ ಎದೆನೋವು ಇಲ್ಲವೆಂದು ವೈದ್ಯರು ಟ್ವೀಟ್ ಮಾಡಿದ್ದಾರೆ. ಅತಿಸಾರವಿದ್ದು, ಕೆಮ್ಮಿನಲ್ಲಿ ಸುಧಾರಣೆ ಕಂಡಿದೆ ಎಂದಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದು, ಸುಧಾರಣೆ ಕಂಡು ಬರ್ತಿದೆ ಎಂದು ಯೇಲ್ ತುಂಗ್ ಚೆನ್ ಸ್ಪೇನ್ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯೇಲ್ ತುಂಗ್ ಚೆನ್ ಸ್ಪೇನ್‍ನ ಯೂನಿವರ್ಸಿಟೇರಿಯೊ ಲಾ ಪಾಜ್ ಆಸ್ಪತ್ರೆಯಲ್ಲಿ ತುರ್ತು ವೈದ್ಯರಾಗಿ ಕೆಲಸ ಮಾಡ್ತಿದ್ದರು. ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅವರಿಗೂ ಕರೋನಾ ಸೋಂಕು ಕಾಣಿಸಿಕೊಂಡಿದೆ. ವೈದ್ಯರು ಮನೆಯಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಟ್ವೀಟರ್ ನಲ್ಲಿ ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು