ನಮ್ಮ ವಿಶ್ವ ವಿದ್ಯಾನಿಲಯ ಹೇಗಿರಬೇಕು? ಮಂಗಳಾ ಅಲ್ಯುಮ್ನೈ ಅಸೋಸಿಯೇಶನ್‍ನಿಂದ ಮಂಗಳೂರು ವಿವಿಗೆ ವಿಶನ್ ಡಾಕ್ಯುಮೆಂಟ್ ಸಲ್ಲಿಕೆ-ಕಹಳೆ ನ್ಯೂಸ್.
ಮಂಗಳೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘ(ಒಂಂ)ವು ವಿವಿಯ ಶ್ರೇಯೋಭಿವೃದ್ಧಿಗಾಗಿ ವ್ಯವಸ್ಥೆಯ ಜೊತೆಗೆ ಕೆಲಸ ಮಾಡಲು ಉತ್ಸುಕವಾಗಿದ್ದು, ವಿಶ್ವವಿದ್ಯಾಲಯದ ಮುಂದಿನ ಬದಲಾವಣೆಗಳು ಹೇಗಿರಬೇಕೆಂಬುದನ್ನು ಮಂಗಳಾ ಅಲ್ಯುಮ್ನೈ ಅಸೋಸಿಯೇಶನ್ ಮಂಗಳೂರು ವಿವಿಗೆ ವಿಶನ್ ಡಾಕ್ಯುಮೆಂಟ್‍ನ್ನು ಸಲ್ಲಿಸಿದೆ.
ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮಂಗಳೂರು ವಿಶ್ವವಿದ್ಯಾನಿಲಯ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಬೆಳವಣಿಗೆಯನ್ನು ಸಾಧಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘ(ಒಂಂ)ದಿಂದ ಪ್ರಮುಖ 4 ಅಂಶಗಳನ್ನೊಳಗೊಂಡ ವಿಶನ್ ಡಾಕ್ಯುಮೆಂಟ್ ಅನ್ನು ತಯಾರಿಸಿ ಮಂಗಳೂರು ವಿವಿಗೆ ನೀಡಲಾಗಿದೆ.
ವಿಶ್ವವಿದ್ಯಾನಿಲಯದ ಪರಿಚಯ, ಸದ್ಯದ ಚಿತ್ರಣ, ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ಯೋಜನೆಗಳು, ಗುರಿ ಸಾಧನೆಯ ಯೋಜನೆ ಹಾಗೂ ತಂತ್ರಗಳು ಮತ್ತು ಸಂಶೋಧನೆ ಮುಂತಾದವುಗಳನ್ನು ಈ ವಿಶನ್ ಡಾಕ್ಯುಮೆಂಟ್ ಒಳಗೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಭಾರತದಲ್ಲಿ ಮನ್ನಣೆ ಪಡೆದ ಟಾಪ್ 10 ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಬೇಕು ಅನ್ನುವ ಉದ್ದೇಶದಿಂದ ಈ ಡಾಕ್ಯುಮೆಂಟ್ ಅನ್ನು ತಯಾರಿಸಲಾಗಿದೆ. ಇದರಲ್ಲಿ ಒಟ್ಟು ನಾಲ್ಕು ಅಂಶಗಳನ್ನು ವಿವರಿಸಲಾಗಿದೆ.
ವಿವಿಯ ಭೌತಿಕ ರಚನೆ ಅಥವಾ ವಿವಿಧ ವಿಭಾಗಗಳ ಬಗ್ಗೆ, ವಿವಿಗೆ ವಿದ್ಯಾರ್ಜನೆಗಾಗಿ ಸೇರುವ ವಿದ್ಯಾರ್ಥಿಗಳಿಗೆ ಮೂಲಭೂತವಾಗಿ ಸಿಗಬೇಕಾದ ವಿದ್ಯೆ ಹಾಗೂ ವಿದ್ಯೆಯನ್ನು ನೀಡುವ ಶಿಕ್ಷಕರ ಬಗ್ಗೆ, ಮಾತ್ರವಲ್ಲದೆ ವಿಶ್ವವಿದ್ಯಾನಿಲಯದಲ್ಲಿ ಕಲಿತು ಈಗ ಉನ್ನತ ಸ್ಥಾನದಲ್ಲಿರುವವರಿಂದ ಆ ವಿದ್ಯಾರ್ಥಿಗಳಿಗೆ ಹೇಗೆ ಮಾರ್ಗದರ್ಶನವನ್ನು ನೀಡಬಹುದು ಮತ್ತು ಆ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸುವ ವಿಚಾರಗಳ ಬಗ್ಗೆ ವಿಶನ್ ಡಾಕ್ಯುಮೆಂಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ವೇಣು ಶರ್ಮ ಅವರು ತಿಳಿಸಿದರು.
ವಿವಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ, ಕೈಗಾರಿಕೆಗಳು ಹಾಗೂ ವಿದ್ಯಾರ್ಥಿಗಳ ನಡುವೆ ಸಂಪರ್ಕ ಬೆಳೆಸುವ ಬಗ್ಗೆ ಹಾಗೂ ವಿಶ್ವವಿದ್ಯಾನಿಲಯದಲ್ಲಿ ಇರುವ ಸಿಲೆಬಸ್‍ಗಳು ಇವತ್ತಿನ ಕಾಲಘಟ್ಟಕ್ಕೆ ಅಥವಾ ಜಾಗತಿಕ ಬೆಳವಣಿಗೆಯ ವೇಗಕ್ಕೆ ಪೂರಕವಾಗಿ ಇದೆಯೇ ಎನ್ನುವ ಬಗ್ಗೆ ಚರ್ಚಿಸಲಾಗಿದೆ. ಮಾತ್ರವಲ್ಲದೆ, ವಿಶ್ವವಿದ್ಯಾನಿಲಯದಲ್ಲಿ ಹೊಸ ವಿಭಾಗಗಳನ್ನು ಆರಂಭಿಸುವ ಬಗ್ಗೆ, ಉದಾಹರಣೆಗೆ ಸಹಕಾರಿ ಕ್ಷೇತ್ರ, ವಿಪತ್ತಿನ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಜವಾಬ್ದಾರಿಯನ್ನು ನಿಭಾಯಿಸುವ ಉದ್ದೇಶದಿಂದ ಅವರಿಗೆ ವಿಪತ್ತು ನಿರ್ವಹಣೆಯ ತರಬೇತಿ, ಎಂಬಿಎ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ಡ್ರೋನ್ ಟೆಕ್ನಾಲಜಿ, ರೋಬೋಟಿಕ್ ಟೆಕ್ನಾಲಜಿ, ಕಲೆ ಮತ್ತು ಸಂವಹನ ಮುಂತಾದ ವಿಶೇಷ ಕೋರ್ಸ್‍ಗಳಿಗೆ ಒತ್ತು ನೀಡುವ ಬಗ್ಗೆ ತಿಳಿಸಲಾಗಿದೆ. ಈ ವಿಶನ್ ಡಾಕ್ಯುಮೆಂಟ್ ವಿಶ್ವವಿದ್ಯಾನಿಲಯದ ಮಾರ್ಗಸೂಚಿಯಾಗಿ ಕೆಲಸ ಮಾಡುತ್ತದೆ.
ವಿಶ್ವವಿದ್ಯಾನಿಲಯ ಜಾಗತಿಕವಾಗಿ ಬೆಳೆಯುವುದಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಕೂಡಾ ತಮ್ಮ ಗುರಿಯನ್ನು ತಲುಪುವಲ್ಲಿ ಹಾದಿಯನ್ನು ನಿರ್ಮಿಸಿಕೊಡುತ್ತದೆ.
ಇನ್ನೂ ವಿವರವಾದ ಮಾಹಿತಿಯನ್ನು ವಿವಿಯ ವಿವಿಧ ವಿಭಾಗ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿತ ಸದಸ್ಯರ ಮುಂದೆ ಮಂಡಿಸಿ ಈ ನಮ್ಮ ವಿಶ್ವವಿದ್ಯಾನಿಲಯವನ್ನು ಹಾಗೂ ಇಲ್ಲಿನ ವಿದ್ಯಾರ್ಥಿಗಳನ್ನು ಇಂದಿನ ಜಾಗತಿಕÀ ಬದಲಾವಣೆಯ ವೇಗಕ್ಕೆ ಪೂರಕವಾಗಿ ಬೆಳೆಸುವ ನಿಟ್ಟಿನಲ್ಲಿ ಈ ವಿಶನ್ ಡಾಕ್ಯುಮೆಂಟ್ ಅನ್ನು ತಯಾರಿಸಲಾಗಿದೆ ಎನ್ನುವುದು ವಿಶನ್ ಡಾಕ್ಯುಮೆಂಟ್ ಸಮಿತಿಯ ಉದ್ದೇಶವಾಗಿದೆ.
ಡಾಕ್ಯುಮೆಂಟ್ ಸಲ್ಲಿಸುವ ಸಂದರ್ಭ ಮಂಗಳಾ ಅಲ್ಯುಮ್ನೈ ಅಸೋಶಿಯೇಶನ್ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ವಿಶನ್ ಡಾಕ್ಯುಮೆಂಟ್ ಸಮಿತಿಯ ವೇಣು ಶರ್ಮ, ಪ್ರೊ. ಪಿ.ಎಲ್. ಧವರ್i, ಮಧುಸೂದನ್, ಡಾ. ಗಣೇಶ್ ಸಂಜೀವ್, ಡಾ. ಪ್ರಭಾಕರ್ ನೀರುಮಾರ್ಗ, ಡಾ. ದೇವಿಪ್ರಭ ಆಳ್ವ ಹಾಗೂ ಶ್ಯಾಮ್‍ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.