Thursday, November 28, 2024
ಸುದ್ದಿ

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ – ಕಹಳೆ ನ್ಯೂಸ್

ಪುತ್ತೂರು: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇಲ್ಲಿ ಮಾಚ್ 6ರಂದು ಜರಗಿದ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಸಂತ ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ನಾಲ್ಕು ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿ, ಪ್ರಬಂಧ ಮಂಡನೆಯನ್ನು ನಡೆಸಿದರು.


ಈ ರಾಜ್ಯ ಮಟ್ಟದ ಈ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಪುಜಾಶ್ರೀ ವಿ ರೈ ಇವರು ‘ಸಿಂಥೆಸಿಸ್ ಆಫ್ ಕೊಬಾಲ್ಟ್ ಡೈಸೆಲೇನಿಯಮ್ ಬೈ ಹೈಡ್ರೋಥರ್ಮಲ್ ಪ್ರೊಸೆಸ್ ಫಾರ್ ಸೂಪರ್ ಕೆಪಾಸಿಟರ್ ಅಪ್ಲಿಕೇಶನ್’ ಕುರಿತು ಮಂಡಿಸಿದ ಪ್ರಬಂಧವು ದ್ವಿತೀಯ ಬಹುಮಾನ ಪಡೆದುಕೊಂಡಿತು. ನಿತ್ಯ ಕೆ ನಾಯರ್ ‘ಸ್ಲಿಪ್ ಕಾಸ್ಟಿಂಗ್ ಆಫ್ ಫ್ಯೂಸ್ಡ್ ಸಿಲಿಕ’ ಕುರಿತು ಪ್ರಬಂಧ ಮಂಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಜಿತ್ ‘ಸ್ಟಡಿ ಆಫ್ ಕ್ರಯೋಜಿನಿಕ್ಸ್ ಅಂಡ್ ಇಟ್ಸ್ ಇಫೆಕ್ಟ್ ಆನ್ ಮೆಟೀರಿಯಲ್ ಪ್ರಾಪರ್ಟಿಸ್ ಆಫ್ ಇಟ್ರಿಯಮ್ ಬೇರಿಯಮ್ ಕಾಪರ್ ಆಕ್ಸೈಡ್ ಸೂಪರ್‍ಕಂಡಕ್ಟರ್’ ಕುರಿತು ಪ್ರಬಂಧ ಮಂಡಿಸಿದರು. ಅಕ್ಷತಾ ಜಿ ‘ಕ್ಯಾರೆಕ್ಟರೈಸೇಶನ್ ಆಫ್ ಸ್ಪಿನ್ ಕೋಟೆಡ್ ಝಿಂಕ್ ಆಕ್ಸೈಡ್ ಥಿನ್ ಫಿಲ್ಮ್ಸ್ ಫಾರ್ ಒಪ್ಟೊ-ಇಲೆಕ್ಟ್ರೋನಿಕ್ ಡಿವೈಸಸ್’ ಕುರಿತು ಪ್ರಬಂಧ ಮಂಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು