Wednesday, January 22, 2025
ಸುದ್ದಿ

ಗುಡಿಸಲು ಮನೆ ಮೇಲೆ ಮಣ್ಣು ಕುಸಿದು ಒಂದೇ ಕುಟುಂಬದ ಮೂವರು ಸಾವು-ಕಹಳೆ ನ್ಯೂಸ್

ಡಾರ್ಜಿಲಿಂಗ್: ಗುಡಿಸಲು ಮನೆ ಮೇಲೆ ಮಣ್ಣು, ಕಲ್ಲು ಕುಸಿದು ಒಂದೇ ಕುಟುಂಬದ ಮೂವರು ಜೀವಂತ ಸಮಾಧಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ನಡೆದಿದೆ.

ಪತಿ, ಪತ್ನಿ ಹಾಗೂ ಅವರ 5 ವರ್ಷದ ಮಗ ನಿದ್ದೆಯಲ್ಲಿದ್ದಾಗ ಅವಘಡ ಜರುಗಿದ್ದು, ಮೂವರೂ ಮೃತಪಟ್ಟಿದ್ದಾರೆ. ಮೃತರನ್ನು ನೀಮಾ ತಮಾಂಗ್ (34), ಚಂದರಾ ತಮಾಂಗ್ (29) ಹಾಗೂ ನೆಹಾಲ್ ತಮಾಂಗ್ (05) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಡಿಯುವ ನೀರಿನ ಪೈಪ್ ಒಡೆದು ನೀರು ಸೋರಿಕೆಯಾದ ಪರಿಣಾಮ ಮಣ್ಣಿನ ಗುಡ್ಡ ಮೆತ್ತಗಾಗಿ ಕುಸಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು