Wednesday, January 22, 2025
ಸುದ್ದಿ

ವಿಟ್ಲದ ರಥಗದ್ದೆಯಲ್ಲಿ ನಡೆಯಬೇಕಾಗಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಿಕೆ – ಸರ್ಕಾರದ ಆದೇಶ ಪಾಲಿಸಿದ ಕೇಸರಿ ಪಡೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಾಳೆ ವಿಟ್ಲದ ರಥಗದ್ದೆಯಲ್ಲಿ ವಿರಾಟ್ ಹಿಂದೂ ಸಮಾಜೋತ್ಸವವನ್ನ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಟಿ ಹಿಂದೂಗಳ ಹೃದಯದಲ್ಲಿ ಹಿಂದೂ ಸಂಗಮದ ತುಡಿತ ದಿನದಿಂದ ದಿನಕ್ಕೆ ಹೆಚ್ಚಾಗಿ,ಈ ಕಾರ್ಯಕ್ರಮದಲ್ಲಿ ಕೇಸರಿ ಪಾತಾಕೆಯನ್ನ ರಾರಾಜಿಸುವಂತೆ ಮಾಡಲು ಸಕಲ ಸಿದ್ದತೆ ನಡೆದಿತ್ತು, ಆದರೆ ಇದೀಗ ಕೊರೋನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಹಿಂದೂ ಸಮಾಜೋತ್ಸವವನ್ನ ಸ್ಧಗಿತಗೊಳಿಸಿ, ಮುಂದೂಡಲಾಗಿದೆ.
ರಾಜ್ಯದಲ್ಲಿ ಎಲ್ಲಾ ಚಟುವಟಿಕೆಗಳನ್ನ ಸ್ಧಗಿತಗೊಳಿಸುವಂತೆ ಸರ್ಕಾರ ಆದೇಶ ನೀಡಿರುವ ಹಿನ್ನಲೆಯಲ್ಲಿ, ಸರ್ಕಾರದ ಆದೇಶವನ್ನ ಪಾಲನೆ ಮಾಡುವ ಮತ್ತು ಜನತೆಯ ಆರೋಗ್ಯದ ದೃಷ್ಠಿಯಿಂದ ನಾಳೆಯ ವಿರಾಟ್ ಹಿಂದೂ ಸಮಾಜೋತ್ಸವವನ್ನ ಮುಂದೂಡಲಾಗಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
25 ಸಾವಿರಕ್ಕಿಂತಲೂ ಅಧಿಕ ಜನತೆ ಸೇರುವ ನಿರೀಕ್ಷೆ ಇತ್ತು.ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಪುತ್ತೂರಿಗೆ ಆಗಮಿಸಿದ್ದಾರೆ. ಜಾಗೃತಿಯ ಸಮಾವೇಶದಲ್ಲಿ ಜನರ ಆರೋಗ್ಯ ಹಾಳಾಗಬಾರದು ಕಾರ್ಯಕ್ರಮ ಯಶಸ್ವಿಯಾಗಬೇಕು ಮುಂದಿನ ದಿನಗಳಲ್ಲಿ ಈ ಸಮಾವೇಶವನ್ನ ನಡೆಸುತ್ತೇವೆ, ಹೀಗಾಗಿ ಹಿಂದೂ ಬಾಂದವರೆಲ್ಲರ ಸಹಕಾರ ಇರಲಿ ಎಂದು ಹಿಂದೂ ಬಾಂದವರಲ್ಲಿ ಮನವಿ ಮಾಡಿದ್ದಾರೆ.
ಶೀಘ್ರದಲ್ಲೆ ಕೇಸರಿ ಶಕ್ತಿಯ ಬಲಾಢ್ಯತೆ ಏನು ಅನ್ನೋದು ವಿಟ್ಲದೊಡೆಯ ಪಂಚಲಿಂಗೇಶ್ವರನ ರಥಗದ್ದೆಯಲ್ಲಿ ವಿರಾಜಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು